ಪುತ್ತೂರು: 33ಕೆ.ವಿ ಕಡಬ-ಸುಬ್ರಹ್ಮಣ್ಯ ವಿದ್ಯುತ್ ಮಾರ್ಗದ ನಿಯತಕಾಲಿಕ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ.6 ಹಾಗೂ ಮೇ.8ರಂದು 33 ಕೆ.ವಿ ಕಡಬ-ಸುಬ್ರಹ್ಮಣ್ಯ ವಿದ್ಯುತ್ ಮಾರ್ಗದಲ್ಲಿ ಬೆಳಿಗ್ಗೆ 9ರಿಂದ ಅಪರಾಹ್ನ 2 ಗಂಟೆಯ ತನಕ ವಿದ್ಯುತ್ ನಿಲುಗಡೆಯಾಗಲಿದೆ.
ಹೀಗಾಗಿ 33/11 ಕೆ.ವಿ ಸುಬ್ರಹ್ಮಣ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಿ, ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.