ಪುತ್ತೂರು : ನಾಳೆಯಿಂದ ಪುತ್ತೂರು ಪೇಟೆಯಲ್ಲಿ ಸುತ್ತಾಡಿದರೆ ಪೊಲೀಸರು ಕ್ರಮ ಕೊಗೊಳ್ಳಲಿದ್ದಾರೆ.
ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಇನ್ನೂ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಪೇಟೆಗೆ ಬರುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಗೆ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮೇ.6 ರಿಂದ ಪುತ್ತೂರು ಪೇಟೆಯಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟು ವಾಹನಗಳಲ್ಲಿ ಪೇಟೆಗೆ ಬರುವವರನ್ನು ವಿಚಾರಣೆ ನಡೆಸಲಿದ್ದಾರೆ.
ತರಕಾರಿ, ಜಿನಸು, ಮೆಡಿಕಲ್ ಸೇರಿದಂತೆ ಅಗತ್ಯ ಸೇವೆಯ ವಾಹನಗಳಿಗೆ ಮಾತ್ರ ಅವಕಾಶವಿದೆ.
ಉಳಿದಂತೆ ಅನಗತ್ಯವಾಗಿ ಓಡಾಡುವ ವಾಹನಗಳ ಮಾಲಕರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ತಿಳಿಸಿದ್ದಾರೆ.


























