ಬೆಂಗಳೂರು :ಇದೀಗ ರಾಜ್ಯದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆಗೊಂಡಿದ್ದು,ಒಂದೇ ದಿನ 26841 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 1236864 ಗುಣಮುಖರಾಗಿದ್ದಾರೆ.
ಇಂದು ದಕ್ಷಿಣ ಕನ್ನಡದಲ್ಲಿ 1529, ಉಡುಪಿಯಲ್ಲಿ 1655, ಉತ್ತರ ಕನ್ನಡ 849 ಸೇರಿದಂತೆ ರಾಜ್ಯದಲ್ಲಿ 50112 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1529 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 50345 ಪ್ರಕರಣಗಳಾಗಿವೆ. ಜಿಲ್ಲೆಯಲ್ಲಿ ಇಂದು 608 ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇನ್ನು 9331 ಸಕ್ರೀಯ ಪ್ರಕರಣಗಳಿವೆ.




























