ಪುತ್ತೂರು : ಯುವ ಬಂಟರ ಸಂಘ ಪುತ್ತೂರು ತಾಲೂಕು ಸಾರಥ್ಯದಲ್ಲಿ ಯುವ ಬಂಟರ ದಿನಾಚರಣೆ ಪ್ರಯುಕ್ತ ‘ತುಳುನಾಡ ಬಂಟರ ಪರ್ಬ-2023’ ಕಾರ್ಯಕ್ರಮ ಜು.23 ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಜು.11 ರಂದು ನಡೆಯಿತು.

ವರ್ಷಂಪ್ರತಿ ಪುತ್ತೂರು ತಾಲೂಕು ಯುವ ಬಂಟರ ಸಂಘ ನಡೆಸಿಕೊಂಡು ಬರುತ್ತಿರುವ ಯುವ ಬಂಟರ ದಿನಾಚರಣೆ ಪ್ರಯುಕ್ತ ಜು.22 ರಂದು ಬೆಳಿಗ್ಗೆ ಗಣಪತಿ ಹವನ ಮತ್ತು ಸತ್ಯ ನಾರಾಯಣ ಪೂಜೆ ಮತ್ತು ಜು.23 ರಂದು ಬೆಳಿಗ್ಗೆ 9 ರಿಂದ ಸಂಜೆಯ ವರೆಗೆ ‘ತುಳುನಾಡ ಬಂಟೆರೆ ಪರ್ಬ-2023’ ತುಳುನಾಡಿನ ಆಯ್ದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಸ್ಪರ್ಧೆ, ಮೂವರು ಹಿರಿಯ ಚೇತನರನ್ನು ಸ್ಮರಿಸುವ ಬಂಟ ಸ್ಮೃತಿ ಕಾರ್ಯಕ್ರಮ ನಡೆಯಲಿದೆ.


























