ಬೆಂಗಳೂರು : ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಇತ್ತೀಚೆಗೆ ಹತ್ಯೆಯಾದ ಹಿರೇಕೊಡಿಯ ನಂದಿ ಪರ್ವತ ಆಶ್ರಮದ ಆಚಾರ್ಯ 108 ಶ್ರೀ ಕಾಮಕುಮಾರನಂದಿ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.

ಸಮಾಜಕ್ಕೆ ಸದಾ ಒಳಿತನ್ನೇ ಬಯಸುವ ಜೈನ ಮುನಿಗಳ ಹತ್ಯೆ ಖಂಡನೀಯ.

ಆ ಸಮುದಾಯದ ಜೊತೆಗೆ ನಾವಿದ್ದೇವೆ, ಶೀಘ್ರವಾಗಿ ನ್ಯಾಯ ದೊರಕಬೇಕು. ಆರೋಪಿಗಳ ರಕ್ಷಣೆಯಾಗದೇ ಶಿಕ್ಷೆಯಾಗಬೇಕು ಎಂದು ಹೇಳಿದರು.






























