ಬೆಂಗಳೂರು : ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮತ್ತೊಂದು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನ ಏರಿಯಾವೊಂದರಲ್ಲಿ ಅಡಗಿಸಿಟ್ಟಿದ್ದ 4-5 ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಉಗ್ರರು ಪೌಡರ್ ರೂಪದ ಕೆಮಿಕಲ್ನಿಂದ ಸ್ಫೋಟವಾಗದಂತೆ ಅಡಗಿಸಿಟ್ಟಿದ್ದರು ಎನ್ನಲಾಗಿದೆ.
ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿದ ಶಂಕಿತ ಉಗ್ರರು ಕೊಡಿಗೇಹಳ್ಳಿಯ ನಿವಾಸದಲ್ಲಿ ಗ್ರೆನೇಡ್ ಇಟ್ಟಿದ್ದರು. ಶಂಕಿತ ಉಗ್ರರ ಬಂಧನದ ಬಳಿಕ ಸಿಸಿಬಿ ಪೊಲೀಸರು ಉಗ್ರರು ಶೇಖರಿಸಿಟ್ಟಿದ್ದ ಗ್ರೆನೇಡ್ಗಳನ್ನು ಪತ್ತೆ ಮಾಡಿದ್ದಾರೆ. ಈ ಗ್ರೆನೇಡ್ಗಳನ್ನು ಶಂಕಿತ ಉಗ್ರರು ಪೌಡರ್ ರೂಪದ ಕೆಮಿಕಲ್ನಿಂದ ಸ್ಫೋಟವಾಗದಂತೆ ಅಡಗಿಸಿಟ್ಟಿದ್ದರು. ಇದೀಗ ಎಲ್ಲಾ ಗ್ರೆನೇಡ್ಗಳನ್ನ ಸಿಸಿಬಿ ಪೊಲೀಸರು ಸೀಜ್ ಮಾಡಿದ್ದಾರೆ.
ಮರಳಿನ ರೀತಿಯ ಪದಾರ್ಥದ ಜೊತೆ ಬ್ಲಾಕ್ ಬಾಕ್ಸ್ನಲ್ಲಿ ಗ್ರೆನೇಡ್ಗಳನ್ನು ಅಡಗಿಸಿಟ್ಟಿದ್ದರು. ಈ ಗ್ರೆನೇಡ್ಗಳನ್ನು ಬ್ಲಾಸ್ಟ್ ಆಗದ ರೀತಿಯಲ್ಲಿ ಸಂಗ್ರಹಿಸಿಟ್ಟಿದ್ದು ಪೊಲೀಸರು ಸೀಜ್ ಮಾಡಿದ್ದಾರೆ.