ನವದೆಹಲಿ: ಕೊರೊನಾ ಸೋಂಕಿಗೆ ತುತ್ತಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ನಿಧನರಾಗಿದ್ದಾರೆಂಬ ವದಂತಿ ಎಲ್ಲೆಡೆ ಹರಿದಾಡುತ್ತಿವೆ.
ಭೂಗತ ಪಾತಕಿ ಮತ್ತು ದರೋಡೆಕೋರ ಛೋಟಾ ರಾಜನ್ ಶುಕ್ರವಾರ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ಸೇವೆಗಳ ಸಂಸ್ಥೆಯಲ್ಲಿ (ಏಮ್ಸ್) ಕೊರೊನಾ ವೈರಸ್ʼಗೆ ಬಲಿಯಾಗಿದ್ದಾರೆಂಬ ವದಂತಿ ಎಲ್ಲೆಡೆ ಹರಿದಾಡುತ್ತಿವೆ ಈ ಬಗ್ಗೆ ಏಮ್ಸ್ ಆಸ್ಪತ್ರೆ ಇದೊಂದು ಸುಳ್ಳು ವದಂತಿಯೆಂದು ಸ್ಪಷ್ಟನೆ ನೀಡಿದೆ.
ರಾಜೇಂದ್ರ ನಿಕಾಲ್ಜೆ ಆಲಿಯಾಸ್ ಛೋಟಾ ರಾಜನ್ʼನ್ನ ಏಪ್ರಿಲ್ 26ರಂದು ಏಮ್ಸ್ʼನಲ್ಲಿ ದಾಖಲಿಸಲಾಗಿತ್ತು. 2015ರಲ್ಲಿ ಇಂಡೋನೇಷ್ಯಾದಿಂದ ಬಂಧನಕ್ಕೊಳಗಾದ ನಂತ್ರ ನವದೆಹಲಿಯ ಉನ್ನತ ಭದ್ರತೆಯ ತಿಹಾರ್ ಜೈಲಿನಲ್ಲಿ ಆತನನ್ನ ಇರಿಸಲಾಗಿತ್ತು. ಈ ಪಾತಕಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ ಎಂಬ ಸುಳ್ಳು ವದಂತಿ ಎಲ್ಲೆಡೆ ಹರಿದಾಡುತ್ತಿದೆ.