ವಿಟ್ಲ : ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ ) ಚಂದಳಿಕೆ ವಿಟ್ಲ ಮತ್ತು ಸಾರ್ವಜನಿಕ ಗಣೇಶೋತ್ಸವ ಚಂದಳಿಕೆ ವಿಟ್ಲ ಇದರ ಬೆಳ್ಳಿಹಬ್ಬ ಕಾರ್ಯಕ್ರಮ ದಿನಾಂಕ ಸ.19 ರಿಂದ 22ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಇದರ ಆಮಂತ್ರಣ ಪತ್ರಿಕೆಯ ವಿತರಣೆಯ ಕಾರ್ಯಕ್ರಮಕ್ಕೆ ಸಾರ್ವಜನಿಕ ಗಣೇಶೋತ್ಸವ ಗೌರವ ಸಮಿತಿ ಅಧ್ಯಕ್ಷರು ಹಾಗೂ ಬೆಳ್ಳಿ ಹಬ್ಬ ಸಮಿತಿ ಗೌರವ ಅಧ್ಯಕ್ಷರಾದ ಶಂಕರ ಭಟ್ ಬದನಾಜೆ ಮಂಗಳಾ ಮಂಟಪದಲ್ಲಿ ಚಾಲನೆ ನೀಡಿದರು.

ಬೆಳ್ಳಿ ಹಬ್ಬ ಸಮಿತಿ ಗೌರವ ಅಧ್ಯಕ್ಷರಾದ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಗಣೇಶ್ ಸಿ, ಅಧ್ಯಕ್ಷರಾದ ಜಯರಾಮ್ ನಿಡ್ಯ, ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾದ ಗಂಗಾಧರ್ ಸಿ, ಕಾರ್ಯದರ್ಶಿ ವಿಶ್ವನಾಥ್ ಎ, ಕೋಶಾಧಿಕಾರಿ ನರೇಂದ್ರ ಸಿ,ಬಿ ಕೆ ಬಾಬು, ಕೃಷ್ಣ ಮುದೂರು, ಜಗದೀಶ್ ಎಂ, ದೀಕ್ಷಿತ್ ಎಂ, ಲೋಹಿತ್ ಎಂ, ಗಂಗಾಧರ ಕೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸದಸ್ಯರು ಸ್ತ್ರೀ ಶಕ್ತಿ ಸಂಘದ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


























