ಬಂಟ್ವಾಳ: ಕೆದಿಲ ಹಾಗೂ ಪೆರಾಜೆ ಗ್ರಾಮದ ಗಡಿಭಾಗದಲ್ಲಿರುವ ಸ್ವಾಗತ ನಗರ ಎಂಬಲ್ಲಿ 14 ಎಕರೆ 56 ಸೆನ್ಸ್ ಗೋಮಾಳವನ್ನು ಅತಿಕ್ರಮಣ ಮಾಡಿರುವುದಾಗಿ ಆರೋಪಿಸಲಾಗಿದ್ದು, ಅತಿಕ್ರಮಣ ಮಾಡಿದ ಜಾಗದಲ್ಲಿ ಕಟ್ಟಿದ ಅಕ್ರಮ ಕಟ್ಟಡವನ್ನು ಇಲಾಖಾ ಅಧಿಕಾರಿಗಳು ತೆರವುಗೊಳಿಸಿದ್ದು, ಆದರೇ ಇದೀಗ ಪುನಃ ಆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕೆದಿಲ ಹಾಗೂ ಪೆರಾಜೆ ಗ್ರಾಮದ ಗಡಿ ಪ್ರದೇಶದಲ್ಲಿರುವ ಗಡಿಯಾರ ಸ್ವಾಗತ ನಗರ ಎಂಬಲ್ಲಿ ಇರುವ 14. ಎಕ್ರೆ 56 ಸೆ. ಗೋಮಾಳದ ಜಾಗವನ್ನು ಅಕ್ರಮವಾಗಿ ಒತ್ತುವರಿ ಆಗಿದೆನ್ನಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ಈ ಜಾಗವನ್ನು ಅಕ್ರಮವಾಗಿ ಒತ್ತೂವರಿ ಗೊಳಿಸಿ, ಅಕ್ರಮ ಶೆಡ್ ಒಂದನ್ನು ನಿರ್ಮಿಸಿದ್ದರು. ಈ ವಿಚಾರವನ್ನು ಹಿಂದೂ ಜಾಗರಣ ವೇದಿಕೆಯು ತೀರ್ವವಾಗಿ ಖಂಡಿಸಿ ಕಾನೂನು ಬದ್ಧ ಹೋರಾಟಕ್ಕೆ ಪ್ರಾರಂಭಿಸಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಆಧಿಕಾರಿಗಳು ಕಾನೂನು ಪ್ರಕಾರ ಅಕ್ರಮ ಕಟ್ಟಡವನ್ನು ತೆರವು ಗೊಳಿಸಿದ್ದರು.
ಜು.27 ರಂದು ಅದೇ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ತೆಂಗಿನ ಗಿಡ ಹಾಗೂ ಇತರೆ ಗಿಡಗಳನ್ನು ನೆಡಲಾಗಿದ್ದು, ಜು.29 ರಂದು ರಾತ್ರಿ ವೇಳೆ ಅದೇ ಸ್ಥಳದಲ್ಲಿ ಅಕ್ರಮವಾಗಿ ಮನೆಯನ್ನು ನಿರ್ಮಿಸಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.

ಅಕ್ರಮ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅವ್ಯಾಹತವಾಗಿ ನಡೆಯುತ್ತಿರುವ ಈ ಲ್ಯಾಂಡ್ ಜಿಹಾದ್ ನ ವಿರುದ್ದ ಹಿಂದೂ ಜಾಗರಣ ವೇದಿಕೆಯು ಮುಂದಿನ ದಿನಗಳಲ್ಲಿ ಕಾನೂನು ಬದ್ಧ ಹೋರಾಟ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ. 24 ಗಂಟೆಯೊಳಗೆ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣರಾಜ ಭಟ್ ಕೆದಿಲ ಆಗ್ರಹಿಸಿದ್ದಾರೆ.

























