ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರ ನೇಮಕಾತಿ ನಡೆಯಲ್ಲಿದ್ದು, ಇದಕ್ಕೆ ಪೂರಕವಾಗಿ ಪುತ್ತೂರು , ಸುಳ್ಯ, ಬೆಳ್ತಂಗಡಿ , ಬಂಟ್ವಾಳ ತಾಲೂಕಿನ ಟ್ರಸ್ಟ್ ಗೆ ಅರ್ಜಿ ನೀಡಿರುವ ಚಾಲಕರಿಗೆ ಪ್ರಥಮ ಬ್ಯಾಚಿನ 30 ಮಂದಿಗೆ ಪ್ರಾದೇಶಿಕ ತರಬೇತಿ ಕೇಂದ್ರ ಹಾಸನದಲ್ಲಿ ಮೂರು ದಿನದ ಬಸ್ ಚಾಲನ ತರಬೇತಿಯನ್ನು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಮ್ಮಿಕೊಳ್ಳಲಾಯಿತು.
ಟ್ರಸ್ಟ್ ನ ಸಿಬ್ಬಂದಿ ಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಪುತ್ತೂರು , ಸುಳ್ಯ, ಬೆಳ್ತಂಗಡಿ , ಬಂಟ್ವಾಳ ತಾಲೂಕಿನ ಹಲವಾರು ಮಂದಿ ತರಬೇತಿಯಲ್ಲಿ ಪಾಲ್ಗೊಂಡರು.

























