ಬಂಟ್ವಾಳ : ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು, ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ 1947ರ ಆಗಸ್ಟ್ 14 ರ ಮಧ್ಯರಾತ್ರಿ ಭಾರತ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಆ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತಾ ಕಳೆದು ಹೋದ ಭಾಗಗಳೆಲ್ಲವನ್ನೂ ಮತ್ತೆ ಒಂದು ಗೂಡಿಸುವ ಜನಜಾಗೃತಿಗಾಗಿ ‘ಅಖಂಡ ಭಾರತ’ ಸಂಕಲ್ಪ ದಿನ ಆ.13 ರಂದು ನಡೆಯಲಿದೆ.
ಮಾಣಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಿಂದ, ಮೆಲ್ಕಾರು ರಾಮದೇವ ಸಭಾಭವನದಿಂದ ಹಾಗೂ ವೀರಕಂಭ ಶಾರದಾ ಭಜನಾ ಮಂದಿರದ ಬಳಿಯಿಂದ ಏಕಕಾಲಕ್ಕೆ ‘ವಾಹನ ಜಾಥಾ’ ಹೊರಟು ಸಂಜೆ 4 ಗಂಟೆಗೆ ಶ್ರೀ ಉಮಾಶಿವ ದೇವಸ್ಥಾನ ಗೇರುಕಟ್ಟೆ ಕಲ್ಲಡ್ಕದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗೇಶ್ ಕಲ್ಲಡ್ಕ ವಹಿಸಲಿದ್ದಾರೆ.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ರಘು ಸಕಲೇಶಪುರ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಿವೃತ್ತ ಸೈನಿಕರು ಮತ್ತು ಮಾದಕಟ್ಟೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ ಮಾದಕಟ್ಟೆ ಗೌರವ ಉಪಸ್ಥಿತಿ ವಹಿಸಲಿದ್ದಾರೆ.


























