ಪುತ್ತೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಜೂರುಪಂಜ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಶ್ರೀ ದುರ್ಗಾ ಭಜನಾ ಮಂದಿರ ಕುಂಜೂರುಪಂಜದಲ್ಲಿ ನೆರವೇರಿತು.

21ನೇ ಗಣೇಶೋತ್ಸವದ ಅಧ್ಯಕ್ಷರು ಮಚ್ಚಿಮಲೆ ವಿರೂಪಾಕ್ಷ ಭಟ್, ಕಾರ್ಯದರ್ಶಿಗಳಾದ ಜಯಂತ್ ಕುಂಜೂರು ಪಂಜ, ಕೋಶಾಧಿಕಾರಿಯಾದ ಸುರೇಶ್ ದೇವಸ್ಯ, ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷರು ಗೀತಾ ಹಾಗೂ ಹಿರಿಯ ನಾಯಕರಾದ ತಿಮ್ಮಪ್ಪ ನಾಯ್ಕ , ಕೃಷಿಕರು ಗೋಪಾಲ್ ಭಟ್ , ಗುರುರಾಜ್ ಕಲ್ಲೂರಾಯ ,ಯಶೋಧರ, ನಾರಾಯಣ ನಾಯ್ಕ , ಪ್ರಮೋದ್ ಕುಮಾರ್ ಜೈನ್, ನವೀನ್ ಜಿ.ಟಿ , ರಂಜಿತ್ ದೇವಸ್ಯ ,ಮಹೇಶ್ ಹಿರೇಮನಿ ಮತ್ತು ಗ್ರಾಮಸ್ಥರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.
