ವಿಟ್ಲ : ಕಳೆದ 53 ವರ್ಷದಿಂದ ದಸರಾ ಸಮಯದಲ್ಲಿ ಹುಲಿವೇಷ ಧರಿಸಿ ವಿಟ್ಲ, ಪುತ್ತೂರು ಭಾಗದ ಜನರನ್ನು ರಂಜಿಸುತ್ತಿದ್ದ ” ಪಿಲಿ ಕಿಟ್ಟಣ್ಣ” ಅಲ್ಪ ಸಮಯದ ಅಸೌಖ್ಯದಿಂದಾಗಿ ಇಂದು ನಿಧನರಾದರು.
ತನ್ನದೇ ಆದ ಹುಲಿ ತಂಡದ ಮೂಲಕ ವಿಶೇಷ ಶೈಲಿಯ ನರ್ತನದ ಮೂಲಕ ಮನೆಮಾತಾಗಿದ್ದ ಇವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ವಿಟ್ಲ ದೇವತಾ ಸಮಿತಿಯ ಶಾರದೋತ್ಸವದ ಪ್ರಾರಂಭದ ಮೆರವಣಿಗೆ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಸಕ್ರಿಯವಾಗಿ ತನ್ನ ತಂಡದೊಂದಿಗೆ ಭಾಗವಹಿಸುತ್ತಿದ್ದರು. ಅಪ್ಪಟ ದೈವಾಭಿಮಾನಿದ್ದ ಇವರು ‘ಪಿಲಿ ಕಿಟ್ಟಣ್ಣ’ ಎಂದೇ ಪ್ರಖ್ಯಾತಿ ಪಡೆದಿದ್ದರು.