ಪುತ್ತೂರು : ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು ಈ ನಿಟ್ಟಿನಲ್ಲಿ ಪೊಲೀಸರು ಪುತ್ತೂರು ಪೇಟೆಗೆ ಸಂಪರ್ಕಿಸುವ ಎಲ್ಲಾ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
ಎಲ್ಲಾ ವಾಹನದ ನಂಬರ್ ಮತ್ತು ಚಾಲಕರ ಹೆಸರು ಪಡೆದು ಅಗತ್ಯವಿದ್ದಲ್ಲಿ ಮಾತ್ರ ಅವರನ್ನು ಪೇಟೆಗೆ ಬಿಡುತ್ತಿದ್ದು, ವಿನ ಕಾರಣ ಯಾವುದೇ ವಾಹನಕ್ಕೆ ಎಂಟ್ರಿ ಇಲ್ಲವಾಗಿದೆ. ಪೇಟೆಗೆ ಸಂಪರ್ಕಿಸುವ ಎಲ್ಲಾ ಕಡೆಗಳಲ್ಲಿಯೂ ಪೊಲೀಸರು ಬಿರುಸಿನ ತಪಾಸಣೆ ನಡೆಸುತ್ತಿದ್ದಾರೆ. ಲಾಕ್ ಡೌನ್ ಸಂದರ್ಭ ರಾತ್ರಿ ವೇಳೆಯೂ ಅನಗತ್ಯ ಓಡಾಟ ನಡೆಸುತ್ತಿದ್ದ ಹಲವರಿಗೆ ಪುತ್ತೂರು ನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.