ಪುತ್ತೂರು : ದರ್ಬೆಯಲ್ಲಿ ನೆಲದ ಅಡಿಯಲ್ಲಿರುವ ಬಿ.ಎಸ್.ಎನ್.ಎಲ್ ತಾಮ್ರದ ಕೇಬಲ್ ಕಳವು ನಡೆದಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಬೆ ಹನುಮವಾಡಿ ಕಟ್ಟಡದ ಬಳಿಯ ಪುಷ್ಪಾಂಜಲಿ ಹಾಲ್ ನ ಪಕ್ಕದಲ್ಲಿ ನೆಲದಡಿಯಲ್ಲಿ ಅಳವಡಿಸಿದ್ದ ತಾಮ್ರದ 20 ಮೀಟರ್ ಉದ್ದದ 200 ಜೊತೆ ಬಿ.ಎಸ್.ಎನ್.ಎಲ್ ಕೇಬಲ್ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಕುರಿತು ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರದ ಉಪ ವಿಭಾಗೀಯ ಅಭಿಯಂತರರಾದ ಜ್ಯೋತಿ ಡಿ.ಎಂ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

























