ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ತಂದೆ ವಸುದೇವ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿಯು ನೆರವಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋಧೆ ಅವನನ್ನು ಸಾಕಿ ಬೆಳೆಸಿದ ತಾಯಿ.
ಶ್ರೀಕೃಷ್ಣನ ಬಗ್ಗೆ ಎಲ್ಲರಿಗೂ ಗೌರವ ಹೆಚ್ಚು ಏಕೆಂದರೆ ಆತನ ತ್ಯಾಗ ಮನೋಭಾವದಿಂದ. ಎಷ್ಟೇ ರಾಜರನ್ನು ಗೆದ್ದರೂ ಗದ್ದುಗೆ ಏರಲಿಲ್ಲ. ಉದಾ- ಕಂಸನನ್ನು ಕೊಂದು ಅವನ ತಂದೆ ಉಗ್ರಸೇನನಿಗೆ ಮಥುರಾ ಪಟ್ಟ ಕಟ್ಟಿದ. ಜರಾಸಂಧನನ್ನು ಕೊಂದು ಅವನ ಮಗ ಸಾಲ್ವನಿಗೆ ಪಟ್ಟಕಟ್ಟಿದ. ಸತ್ಯ ಧರ್ಮಮೀರಿದವರು ಬಂಧುಗಳಾದರೂ ಶಿಕ್ಷಾರ್ಹರು ಎಂಬ ನೀತಿಯನ್ನು ಮಾವ ಕಂಸ, ಭಾವ ಶಿಶುಪಾಲ, ಅಜ್ಜ ಮಾಗಧ ಮುಂತಾದವರನ್ನು ವಧಿಸುವ ಮೂಲಕ ತೋರಿಸಿದ್ದಾನೆ.
ಇಷ್ಟೆಲ್ಲಾ ಆದರೂ ಶ್ರೀಕೃಷ್ಣನ ನಯ-ವಿನಯ ಅನುಕರಣೀಯ. ರಾಜ ಯಾಗದಲ್ಲಿ ಆತ ಬ್ರಾಹ್ಮಣರ ಹಾಗೂ ಹಿರಿಯರ ಕಾಲು ತೊಳೆಯುತ್ತಾನೆ. ಇಂತಹ ದೊಡ್ಡ ಗುಣದಿಂದಲೇ ಅವನಿಗೆ ಆ ಯಾಗದ ದೊಡ್ಡ ಸ್ಥಾನವಾದ ‘ಅಗ್ರಪೂಜೆ’ ಲಭಿಸಿತು. ನಂಬಿ ಕರೆದರೆ ‘ಓ’ ಎಂದು ಓಡಿ ಬಂದು ಉದ್ಧರಿಸುವುದು ಅವನ ವೈಶಿಷ್ಟ್ಯ.
ಸುಧಾಮನ ಪ್ರಸಂಗ, ದೌಪದಿಯ ವಸ್ತ್ರಾಪಹರಣ ಸಂದರ್ಭ, ದೂರ್ವಾಸಾತಿಥ್ಯ ಸನ್ನಿವೇಶ, ಕುಬ್ಜೆಯ ಗೂನು ತಿದ್ದಿ ಮುದ್ದಾಗಿ ಮಾಡಿದ್ದು, ಧೃತರಾಷ್ಟ್ರನಿಗೆ ದಿವ್ಯದೃಷ್ಟಿ ನೀಡಿದ್ದು ಮುಂತಾದ ಸಂದರ್ಭಗಳು ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತವೆ.
ಇಂತಹ ಮಹಾಮಹಿಮನ ಜನ್ಮಸ್ಮರಣೆ ನಿಜಕ್ಕೂ ಅರ್ಥಪೂರ್ಣ. ಶ್ರೀಕೃಷ್ಣನು ನಮ್ಮ ಜೀವನದ ಕಲುಷಿತ ಕಾಳರಾತ್ರಿಯಲ್ಲಿ ಜನಿಸಿ ಎಲ್ಲರನ್ನೂ ಪವಿತ್ರಾತ್ಮರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವ ಶುಭದಿನ ಇದು.
ಸನಾತನ ಧರ್ಮದ ವಿಶೇಷ ಹಬ್ಬ ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿವಸ. ಶ್ರೀ ಕೃಷ್ಣನ ಜನ್ಮ ದಿನವನ್ನು ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ಆಚರಿಸಲ್ಪಡುತ್ತದೆ.
ಈ ಪವಿತ್ರ ಶ್ರೇಷ್ಠ ದಿನದಂದು ವಿಷ್ಣು ತನ್ನ ಎಂಟನೇ ಅವತಾರವನ್ನು ತಾಳಿದ, ಇದಕ್ಕೆ ಕಾರಣ ಕೃಷ್ಣನೇ ಭಗವದ್ಗೀತೆಯಲ್ಲಿ ಸಾರಿರುವಂತೆ,..
“ಪರಿತ್ರಾಣಾಯ ಸಾಧೂನಾಂ
ವಿನಾಶಾಯ ಚದುಷ್ಕೃತಂ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ”
ಶಿಷ್ಟ ರಕ್ಷಣಾ ದುಷ್ಟ ಶಿಕ್ಷಣೆ. ಸಾಧು ಜನರನ್ನು ರಕ್ಷಿಸುವುದಕ್ಕೆ ದುರ್ಜನರ ವಿನಾಶ ಮಾಡುವ ಉದ್ದೇಶ ಹಾಗೂ ಧರ್ಮದ ಪುನರುತ್ಥಾನಕ್ಕಾಗಿ ವಿಷ್ಣು ದ್ವಾಪರ ಯುಗದಲ್ಲಿ ಕೃಷ್ಣಾವತಾರ ತಾಳುತ್ತಾನೆ.
ಬಾಲ ಕೃಷ್ಣನ ಲೀಲೆ ಬಲು ಚೆಂದ:
‘ಮಣ್ಣು ತಿನ್ನಬೇಡ’ ಕಾತುರದಿ ಯಶೋಧೆ ಬಾಯಿ ತೆಗೆ ಅಂದಾಗ ಮಾತೆಗೆ ತೋರಿದ ಜಗವ ತನ್ನ ಬಾಯಲ್ಲಿ. ಕಾಳಿಂಗ ಸರ್ಪವ ಕೊಂದು ಮಕ್ಕಳ ಕಾಪಾಡಿದ . ಗೋವರ್ಧನ ಗಿರಿ ಎತ್ತಿ ಪ್ರವಾಹದಿಂದ ಜನರ ಕಾಪಾಡಿದ. ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಕಂಸನ ವಧೆ ಮಾಡಿ ತಂದೆ-ತಾಯಿಯರ ಬಂಧನ ಬಿಡಿಸಿದ. ಗೋಪಿಯರಿಗೆ ತನ್ನ ಲೀಲೆ ತೋರಿಸಿ ರಾಸಕ್ರೀಡೆ ಆಡಿದ . ಹುಟ್ಟುತ್ತಲೇ ಪವಾಡಗಳನ್ನು ಸೃಷ್ಟಿಸಿ ಎಲ್ಲರನ್ನೂ ಆಶ್ವರ್ಯಕ್ಕೆ ಒಳಮಾಡುತ್ತಿದ್ದ.
ನವನೀತ ಚೋರ, ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಎಂದು ಮುನಿದ ಅಮ್ಮನಿಗೆ ಹೇಳಿದ. ಗುರುಕುಲದ ಸ್ನೇಹಿತ ಸುಧಾಮನ ಬಡತನ ನೀಗಿದ. ಪಾಂಡವರ ಪಕ್ಷವಾಗಿ ನಿಂತು ಅವರನ್ನು ದುರ್ಯೋಧನನ ಕಪಟಗಳಿಂದ ಕಾಪಾಡಿದ. ದ್ರೌಪದಿಯ ಕರೆಗೆ ಓಗೊಟ್ಟು ಅವಳ ಗೌರವ ಕಾಪಾಡಿದ. ಅರ್ಜುನನನ್ನು ಪರಮ ಸಂಗಾತಿಯಾಗಿ ಆರಿಸಿ, ಧರ್ಮಕ್ಕೆ ಹೋರಾಡು ಎಂದು ಪ್ರೋತ್ಸಾಹಿಸಿದ. ಪಾಂಡವ ಕೌರವರ ನಡುವೆ ಶಾಂತಿ ಧೂತನಾಗಿ ಯುದ್ಧ ಬೇಡ ಎಂದು ಬುದ್ಧಿ ಹೇಳಿದ. ದುರ್ಯೋಧನನ ಅಹಂಕಾರ ಮಹಾಭಾರತದ ಯುದ್ಧದವರೆಗೂ ಹೋದಾಗ, “ನನಗೆ ಯುದ್ಧಬೇಡ’ ಎಂದು ಅರ್ಜುನ ಧೈರ್ಯ ಕಳೆದುಕೊಂಡಾಗ ಕ್ಷತ್ರಿಯ ಧರ್ಮವನ್ನು ಬೋಧಿಸಿ, ನೀನು ಧರ್ಮಕ್ಕೆ ಹೋರಾಡು ಎನ್ನುತ್ತ ಅವನ ರಥಕ್ಕೆ ಸಾರಥಿಯಾದ. ಅರ್ಜುನನಿಗೆ ವಿಶ್ವರೂಪ ತೋರಿಸಿ ತನ್ನ ನಿಜಸ್ವರೂಪ ತೋರಿದ. ನಾನು ನನ್ನವರನ್ನು ಕೊಲ್ಲಲಾರೆ ಅಂದಾಗ ಆತ್ಮ ಜ್ಞಾನ ತಿಳಿಸಿ ಭಗವದ್ಗೀತೆ ಬೋಧಿಸಿದ. ಭಗವದ್ಗೀತೆ ಮೂಲಕ ಮೋಕ್ಷ ಪಡೆಯುವ ಮಾರ್ಗವನ್ನು ನೀಡಿದ. ಜ್ಞಾನ ಮಾಗ, ಕರ್ಮಮಾಗ, ಭಕ್ತಿ ಮಾರ್ಗಗಳನ್ನು ಸೂಚಿಸಿ ನಿದರ್ಶನ ನೀಡಿದ.
ಜೀವನದ ಮಾರ್ಗ ತೋರಿಸಿದ ಮಾಧವ
ಅರ್ಜುನನನ್ನು ಪರಮ ಸಂಗಾತಿಯಾಗಿ ಆರಿಸಿ, ಧರ್ಮಕ್ಕೆ ಹೋರಾಡು ಎಂದು ಪ್ರೋತ್ಸಾಹಿಸಿದ. ಪಾಂಡವ ಕೌರವರ ನಡುವೆ ಶಾಂತಿ ಧೂತನಾಗಿ ಯುದ್ಧ ಬೇಡ ಎಂದು ಬುದ್ಧಿಹೇಳಿದ. ದುರ್ಯೋಧನನ ಅಹಂಕಾರ ಮಹಾಭಾರತದ ಯುದ್ಧದವರೆಗೂ ಹೋದಾಗ, “ನನಗೆ ಯುದ್ಧಬೇಡ’ ಎಂದು ಅರ್ಜುನ ಧೈರ್ಯ ಕಳೆದುಕೊಂಡಾಗ ಕ್ಷತ್ರಿಯ ಧರ್ಮವನ್ನು ಬೋಧಿಸಿ, ನೀನು ಧರ್ಮಕ್ಕೆ ಹೋರಾಡು ಎನ್ನುತ್ತ ಅವನ ರಥಕ್ಕೆ ಸಾರಥಿಯಾದ. ಅರ್ಜುನನಿಗೆ ವಿಶ್ವರೂಪ ತೋರಿಸಿ ತನ್ನ ನಿಜಸ್ವರೂಪ ತೋರಿದ. ನಾನು ನನ್ನವರನ್ನು ಕೊಲ್ಲಲಾರೆ ಅಂದಾಗ ಆತ್ಮ ಜ್ಞಾನ ತಿಳಿಸಿ ಭಗವದ್ಗೀತೆ ಬೋಧಿಸಿದ. ಭಗವದ್ಗೀತೆ ಮೂಲಕ ಮೋಕ್ಷ ಪಡೆಯುವ ಮಾರ್ಗವನ್ನು ನೀಡಿದ. ಜ್ಞಾನ ಮಾರ್ಗ, ಕರ್ಮಮಾರ್ಗ, ಭಕ್ತಿ ಮಾರ್ಗಗಳನ್ನು ಸೂಚಿಸಿ ನಿದರ್ಶನ ನೀಡಿದ.
ಕೃಷ್ಣ ಎಲ್ಲೆಲ್ಲಿ ಇರುವನೋ ಅಲ್ಲಿ ಸತ್ಯ, ಧರ್ಮ, ಶಾಂತಿ, ಪ್ರೇಮ ಶಾಶ್ವತ…