ಉತ್ತರಪ್ರದೇಶ : ಗಾಜಿಯಾಬಾದ್ನಲ್ಲಿ ರೇಬಿಸ್ ಖಾಯಿಲೆಗೆ 14 ವರ್ಷದ ಬಾಲಕ ಶಹವೇಜ್ ಬಲಿಯಾಗಿದ್ದಾನೆ.
ಕಳೆದ 45 ದಿನಗಳ ಹಿಂದೆ ನೆರೆಮನೆಯ ನಾಯಿಯೊಂದು ಈ ಬಾಲಕನಿಗೆ ಕಚ್ಚಿತ್ತು. ಆದ್ರೆ ಬಾಲಕ ಭಯದಿಂದ ಈ ಬಗ್ಗೆ ಪೋಷಕರಿಗೆ ತಿಳಿಸದೆ ಮುಚ್ಚಿಟ್ಟಿದ್ದ. ಆದರೆ ದಿನ ಕಳೆದಂತೆ ಬಾಲಕನ ವಿಚಿತ್ರ ವರ್ತನೆ ಹಾಗೂ ನಾಯಿಯಂತೆ ಬೊಗಳುವುದನ್ನ ಕಂಡ ಪೋಷಕರು ಭಯಪಟ್ಟು ವೈದ್ಯರನ್ನ ಸಂಪರ್ಕಿಸಿದ್ದಾರೆ.
ದೆಹಲಿಯ ಏಮ್ಸ್ ಸೇರಿದಂತೆ ಎಲ್ಲಾ ಪ್ರಸಿದ್ದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲು ಪ್ರಯತ್ನಿಸಿದರು. ವೈದ್ಯರು ಬಾಲಕನಿಗೆ ರೇಬಿಸ್ ತಗುಲಿರೋದು ಪತ್ತೆ ಹಚ್ಚಿದ್ದಾರೆ. ಆದರೆ ಸಮಯ ಮೀರಿದ್ದರಿಂದ ವೈದ್ಯರಿಗೆ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನು ಬಾಲಕ ಶಹವೇಜ್ ಅಂಬ್ಯುಲೆನ್ಸ್ ನಲ್ಲಿ ತಂದೆ ಯಾಕೂಬ್ ತೊಡೆಯ ಮೇಲೆ ಪ್ರಾಣ ಬಿಟ್ಟಿದ್ದಾನೆ. ಉತ್ತರ ಪ್ರದೇಶದ ಬುಲಂದ್ ಶಹರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ವೇಳೆ ಅಳುತ್ತಾ, ನರಳುತ್ತಾ ಶಹವೇಜ್ ಕೊನೆಯುಸಿರೆಳೆದಿದ್ದಾನೆ.