ಐಪಿಎಲ್ ಕೂಟದಲ್ಲೇ ಅತ್ಯಂತ ಬಲಿಷ್ಠ ಹಾಗೂ ಸಮತೋಲನದ ತಂಡ ಎಂಬ ಹೆಗ್ಗಳಿಕೆ ಪಡೆದಿರುವ ಹಾಗೂ ದಾಖಲೆಯ ನಾಲ್ಕು ಬಾರಿ ಐಪಿಎಲ್ ಕಿರೀಟ ಧರಿಸಿರುವ, ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್, 13ನೇ ಆವೃತ್ತಿಯಲ್ಲೂ ಚಾಂಪಿಯನ್ ಆಗಿ ಮೂಡಿಬಂದು ದಾಖಲೆ ಮಾಡಿದೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು, ಶ್ರೇಯಸ್ ಅಯ್ಯರ್ ನೇತೃತ್ವದ ದಿಲ್ಲಿ ಕ್ಯಾಪಿಟಲ್ಸ್‌ನ್ನು 5 ವಿಕೆಟ್‌ಗಳಿಂದ ಸೋಲಿಸಿ ದಾಖಲೆಯ ಐದನೇ ಬಾರಿ ಕಪ್ ಎತ್ತಿಕೊಂಡಿತು.
ಬೌಲಿಂಗ್, ಬ್ಯಾಟಿಂಗ್‌ಗಳಲ್ಲಿ ಪಾರಮ್ಯ ಮೆರೆದ ಮುಂಬೈ ಇಂಡಿಯನ್ಸ್ ಸತತ ಎರಡು ಬಾರಿ ಕಪ್ ಗೆದ್ದ ದಾಖಲೆಯನ್ನೂ ಮಾಡಿದೆ. ಚೆನ್ನೈ ಮಾತ್ರ ಹಿಂದೆ ಈ ಸಾಧನೆ ಮಾಡಿತ್ತು.
ಗೆಲ್ಲಲು 157 ರನ್‌ಗಳ ಗುರಿ ಪಡೆದ ಮುಂಬೈಗೆ ಕ್ಲಿಂಟನ್ ಡಿಕಾಕ್ ಮತ್ತು ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ನಾಲ್ಕು ಓವರುಗಳಲ್ಲಿಯೇ 45 ರನ್ ಚಚ್ಚಿದ ಆರಂಭ ಜೋಡಿಯನ್ನು ಸ್ಟೊಯಿನಿಸ್ ಮುರಿದರು. 20 ರನ್ ಮಾಡಿದ್ದ ಕ್ಲಿಂಟನ್ ಔಟಾದರು. ನಾಯಕನನ್ನು ಕೂಡಿಕೊಂಡ ಸೂರ್ಯಕುಮಾರ್ ಯಾದವ್ ಬಿರುಸಿನ ಆಟಕ್ಕೆ ಮೊದಲಾದರೂ ಅವರಾಟ 19ಕ್ಕೆ ಸೀಮಿತಗೊಂಡಿತು. ಸೂರ್ಯಕುಮಾರ್ ರನೌಟ್‌ಗೆ ಬಲಿಯಾದರು. ನಂತರ ಬಂದ ಇಶಾನ್ ಕಿಶನ್ ಎಂದಿನಂತೆ ಬಿರುಸಿನ ಆಟ ಆರಂಭಿಸಿದರು. ಇನ್ನೊಂದೆಡೆ ನಾಯಕ ರೋಹಿತ್ ಬ್ಯಾಟ್‌ನಿಂದ ರನ್ ಸರಾಗವಾಗಿ ಹರಿದುಬರುತ್ತಿತ್ತು. ತಂಡದ ಮೊತ್ತ 137 ಆಗಿದ್ದಾಗ ರೋಹಿತ್‌ನನ್ನು ನೋರ್ಟಿಜೆ ಔಟ್ ಮಾಡಿದರು. ಇಲ್ಲಿಂದ ಆಟ ರೋಚಕತೆಯತ್ತ ಸಾಗಿತು. ಪೊಲ್ಲಾರ್ಡ್ 9 ರನ್ ಗಳಿಸಿ ಔಟಾದರೆ, ಗೆಲ್ಲಲು 1 ರನ್ ಬಾಕಿಯಿದ್ದಾಗ ಹಾರ್ದಿಕ್ ಪಾಂಡ್ಯ ಔಟಾದರು. ಪೊಲ್ಲಾರ್ಡ್ ರಬಾಡಾಗೆ ಬೌಲ್ಡ್ ಆದರೆ, ಹಾರ್ದಿಕ್ ನೋರ್ಟಿಜೆಗೆ ಎರಡನೇ ಬಲಿಯಾದರು. ಇಶಾನ್ ಕಿಶನ್ 33 ರನ್ ಗಳಿಸಿ ಔಟಾಗದೇ ಉಳಿದರು.