ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಹಲವೆಡೆ ಕ್ರಿಕೆಟ್ ಆಡುತ್ತಿದ್ದ ಯುವಕರಿಗೆ ಬೀಟ್ ಪೋಲೀಸರು ಎಚ್ಚರಿಕೆ ನೀಡಿದ ಘಟನೆ ಮೇ.11ರಂದು ನಡೆದಿದೆ .
ಕೋವಿಡ್ ನಿಯಮಗಳು ಜಾರಿಯಲ್ಲಿದೆ. ಈ ಪ್ರಕಾರ ಯಾರೂ ಕೂಡಾ ಒಟ್ಟು ಸೇರುವಂತಿಲ್ಲ.. ದಿನನಿತ್ಯದಂತೆ ಈ ದಿನವೂ ಒಂದಷ್ಟು ಯುವಕರು ಒಟ್ಟು ಸೇರಿ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು.. ವಿಚಾರ ತಿಳಿದ ಬೀಟ್ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕರಿಗೆ ಎಚ್ಚರಿಕೆ ನೀಡಿದ ಘಟನೆ ಪುತ್ತೂರು ನಗರ ಸಭಾ ವ್ಯಾಪ್ತಿಯ ಹಲವೆಡೆ ವರದಿಯಾಗಿದೆ.