ಮಂಗಳೂರು : ಕೊರೊನಾ ಸಂಕಷ್ಟ ದ ಸಂದರ್ಭದಲ್ಲಿ ಹಗಲಿರುಳೆನ್ನದೆ ದುಡಿಯುವ ಪೊಲೀಸ್ ವರ್ಗದವರಿಗೇ ಎಸ್ ಸಿ ಡಿ ಸಿಸಿ ಬ್ಯಾಂಕ್ ವತಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಪೊಲೀಸ್ ಆಯುಕ್ತರಾದಂತಹ ಎನ್. ಶಶಿಕುಮಾರ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಪೊಲೀಸ್ ಕಮಿಷನರ್ ಎನ್. ಶಶಿ ಕುಮಾರ್ ನಮ್ಮ ಎಲ್ಲಾ ಕಚೇರಿಗಳಲ್ಲಿ ಮತ್ತು ಠಾಣೆಗಳಲ್ಲಿ ಎಲ್ಲಾ ಅಧಿಕಾರಿಗಳ ಟೆಂಪ್ ರೆಚರ್ ಚೆಕ್ ಮಾಡಿ ಅವರಿಗೆ ಸ್ಯಾನಿ ಟೈಸರ್ ಒದಸುವುದು ಮತ್ತು ಅವರು ಮಾಸ್ಕ್ ಹಾಕಿದ್ದಾರ ಎಂದು ನೋಡುವಂತದ್ದು, ಅವರಿಗೇ ಏನಾದರೂ ಸಮಸ್ಯೆಯಿದ್ದರೇ ಅದನ್ನು ವಿಚಾರಿಸಿ ಪರಿಹರಿಸುವುದು ಮತ್ತು ಸಿಬ್ಬಂದಿಗಳ ಇಮ್ಯೂನಿಟಿ ಪವರ್ ಜಾಸ್ತಿಗಾಗಿ ಕಷಾಯದ ವ್ಯವಸ್ಥೆ ಕೂಡ ಮಾಡಲಾಗಿದೆ. ಪೊಲೀಸರ ಕರ್ತವ್ಯದ ಬಗ್ಗೆ ಬಹಳಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವುದೇ ಸಹಕಾರಗಳನ್ನು ಕೊಡುವುದಾಗಿ ಬಹಳಷ್ಟು ಜನ ತಿಳಿಸಿದ್ದಾರೆ ಎಂದು ಹೇಳಿದರು.
ಎಸ್ ಸಿ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು 5 ಸಾವಿರ ಮಾಸ್ಕ್ ಹಾಗೂ ಎಲ್ಲಾ ಠಾಣೆಗಳಿಗೆ ಒಂದೊಂದು ಕ್ಯಾನ್ ಸ್ಯಾನಿಟೈಸರ್ ಗಳನ್ನು ನೀಡಿದ್ದಾರೆ ಇದು ಬಹಳ ಉಪಯುಕ್ತ ಕಾರ್ಯ, ಈಗಾಗಲೇ ಇವೆಲ್ಲವೂಗಳನ್ನು ಇಲಾಖೆ ವತಿಯಿಂದ ನೀಡಿದ್ದೇವೆ ಆದರೆ ಈಗಿನ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿ ಟೈಸರ್ ಗಳು ಎಷ್ಟು ಇದ್ದರೂ ಸಾಲದು, ಹಾಗಾಗಿ ಇವುಗಳು ಸಿಬ್ಬಂದಿಗಳಿಗೆ ಬಹಳಷ್ಟು ಉಪಯುಕ್ತವಾಗಲಿದೆ ಎಂದರು.
ಈ ಸಂದರ್ಭ ಎಸ್. ಸಿ.ಡಿ.ಸಿ. ಸಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು.