Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ : ‘ಧನಾತ್ಮಕ ಕಾರ್ಯಗಳಿಂದ ಸಾಮಾಜಿಕ ಬದಲಾವಣೆ’ – ಡಾ.ಹರಿಪ್ರಸಾದ್

October 2, 2023
in ಪುತ್ತೂರು
0
ಅಂಬಿಕಾ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ : ‘ಧನಾತ್ಮಕ ಕಾರ್ಯಗಳಿಂದ ಸಾಮಾಜಿಕ ಬದಲಾವಣೆ’ – ಡಾ.ಹರಿಪ್ರಸಾದ್
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು : ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಿಕೊಳ್ಳುವ ಸಣ್ಣ ಪುಟ್ಟ ಬದಲಾವಣೆಗಳು ದೊಡ್ಡ ದೊಡ್ಡ ಪರಿಣಾಮಗಳಿಗೆ ಕಾರಣೀಭೂತವಾಗುತ್ತವೆ. ನಮ್ಮಿಂದಾಗಿ ಉಂಟಾಗಬಹುದಾದ ಧನಾತ್ಮಕ ಕಾರ್ಯಗಳು ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ರಾಷ್ಟ್ರೀಯ ಸೇವಾ ಯೋಜನೆಯು ವ್ಯಕ್ತಿ ವ್ಯಕ್ತಿಗಳ ಆಂತರಿಕ ಶಕ್ತಿಯನ್ನು ಅನಾವರಣಗೊಳಿಸಲು ಅತ್ಯುತ್ತಮ ವೇದಿಕೆಯಾಗಿ ಕೆಲಸ ನಿರ್ವಹಿಸುತ್ತದೆ ಎಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ರ್ತ ಉಪನ್ಯಾಸಕ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಹರಿಪ್ರಸಾದ್ ಎಸ್ ಹೇಳಿದರು.

Advertisement
Advertisement

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಜಲ ಸಂರಕ್ಷಣಾ ಅರಿವು ಆಂದೋಲನಕ್ಕೆ ಚಾಲನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.

Advertisement
Advertisement

Advertisement

ನಮ್ಮೊಳಗೆ ಅವಿತಿರುವ ವೈವಿಧ್ಯಮಯ ಪ್ರತಿಭೆಗಳ ಅನಾವರಣಕ್ಕೆ ಎನ್.ಎಸ್.ಎಸ್ ಪೂರಕ. ಎನ್.ಎಸ್.ಎಸ್ ಎಂದಾಕ್ಷಣ ದೈಹಿಕವಾಗಿ ದುಡಿಯುವುದು ಮಾತ್ರ ಎಂಬ ತಪ್ಪು ಕಲ್ಪನೆಯನ್ನು ಅನೇಕರು ಹೊಂದಿದ್ದಾರೆ. ಆದರೆ ಇಲ್ಲಿ ದೈಹಿಕ ಶ್ರಮ ಎಂಬುದು ಸಾಂಕೇತಿಕವಾಗಿ ಅಷ್ಟೇ ಇದೆ. ವ್ಯಕ್ತಿತ್ವ ವಿಕಸನವೇ ಸೇವಾ ಯೋಜನೆಯ ನಿಜವಾದ ಉದ್ದೇಶ. ಸಮಾಜದಲ್ಲಿ ಜಾಗೃತಿ ಮೂಡಿಸುವ, ಬದಲಾವಣೆಗಳನ್ನು ತರುವ ಕಾರ್ಯದಲ್ಲಿ ಸೇವಾ ಯೋಜನೆಯ ಕಾರ್ಯಕರ್ತರು ನಿರಂತರವಾಗಿ ಶ್ರಮಿಸುತ್ತಾರೆ ಎಂದರು.

ಇಂದು ಜನಜಾಗೃತಿ ಮೂಡಿಸುವುದು ಅತ್ಯಂತ ಸುಲಭ. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿದರೆ ಜನರನ್ನು ಉತ್ಕೃಷ್ಟ ಹಾದಿಯಲ್ಲಿ ಮುನ್ನಡೆಯುವಂತೆ ಮಾಡಬಹುದು. ಆದರೆ ಮೊಬೈಲ್ ಅನ್ನು ಯಾವ ಕಾರಣಕ್ಕಾಗಿ ಬಳಸಬೇಕು ಎಂಬ ನಿರ್ಣಯವನ್ನು ಮೊದಲು ಮಾಡಬೇಕಿದೆ. ಮತ್ತೊಬ್ಬರಿಗೆ ಉಪಯೋಗವಾಗುವಂತಹ ವಿಷಯಗಳಿಗಾಗಿ ನಾವು ಮೊಬೈಲ್ ಬಳಸಲಾರಂಭಿಸಿದರೆ ಬದಲಾವಣೆ ನಮ್ಮಿಂದಲೇ ಆರಂಭಗೊಳ್ಳುತ್ತದೆ ಎಂದು ತಿಳಿಹೇಳಿದರು.

ಅಧ್ಯಕ್ಷತೆ ವಹಿಸಿ, ಜಲ ಸಂರಕ್ಷಣಾ ಅರಿವು ಆಂದೋಲನಕ್ಕೆ ಚಾಲನೆ ನೀಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶ ನನ್ನದು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಹಾಗಾದಾಗ ದೇಶದ ಮೇಲೆ ಕಸ ಸುರಿಯುವವರನ್ನು ಕಾಣುವಾಗ ಹೋಗಿ ಬುದ್ಧಿ ಮಾತು ಹೇಳಬೇಕೆನಿಸುತ್ತದೆ. ನಿರ್ಲಕ್ಷದಿಂದ ಕರ್ತವ್ಯ ನಿರ್ವಹಿಸುವವರ ಬಳಿ ಹೋಗಿ ಎಚ್ಚರಿಸಬೇಕೆನಿಸುತ್ತದೆ. ನನಗಾಗಿ ಸ್ವಲ್ಪ ಸಮಾಜಕ್ಕಾಗಿ ಸರ್ವಸ್ವ ಎಂಬ ಭಾವ ನಮ್ಮಲ್ಲಿ ಮೂಡಿದಾಗ ನಾವು ನಿಜವಾದ ಸ್ವಯಂಸೇವಕರಾಗುತ್ತೇವೆ. ರಕ್ತದಾನ, ಅಂಗಾಂಗ ದಾನಗಳಂತಹ ಪುಣ್ಯ ಕಾರ್ಯದಲ್ಲಿ ನಾವು ತೊಡಗುವುದಲ್ಲದೆ ಇತರರನ್ನೂ ತೊಡಗುವಂತೆ ಪ್ರೇರಣೆ ನೀಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ನಾಯಕರು ಹಾಗೂ ಸ್ವಯಂಸೇವಕರಿಗೆ ಪ್ರಮಾಣವಚನ ಬೋಧಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಮಹಿಮಾ ಹೆಗಡೆ ಪ್ರಾರ್ಥಿಸಿದರು. ವಿದ್ಯಾರ್ಥಿ ನವನೀತ್ ಸ್ವಾಗತಿಸಿದರು. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರ್ಷಿತ್ ಪಿಂಡಿವನ ಪ್ರಸ್ತಾವನೆಗೈದರು. ಎನ್.ಎಸ್.ಎಸ್. ನಾಯಕಿಯರಾದ ತೃಪ್ತಿ ಎಂ ಮಯ್ಯಾಳ ವಂದಿಸಿ ದೀಪಾ ಕಾರ್ಯಕ್ರಮ ನಿರ್ವಹಿಸಿದರು.

Previous Post

ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ : ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

Next Post

ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಹಾಲ್ ರಾಜ್‌ಗೆ ಬೆಳ್ಳಿ ಪದಕ

OtherNews

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!
ಕ್ರೈಮ್

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

October 1, 2026
ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ
ಪುತ್ತೂರು

ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

October 1, 2026
ಸೂರಿಕುಮೇರು ಬಳಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು..!
ಕ್ರೈಮ್

ಸೂರಿಕುಮೇರು ಬಳಿ ಕಾರು ಡಿಕ್ಕಿ: ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು..!

September 30, 2026
ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!
ಪುತ್ತೂರು

ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4: ಹುಲಿ ವೇಷ ತಂಡಗಳ ಪ್ರಮುಖರ ಸಭೆ..!

September 30, 2026
ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!
Featured

ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

September 29, 2026
ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!
Featured

ರಾಜ್ಯ ರಾಜಧಾನಿಯಲ್ಲಿ ತುಳುನಾಡ ಜವನೆರ್ ವತಿಯಿಂದ ಅಷ್ಟಮಿದ ಐಸಿರ- ಸಿಎಂ ಡಿಕೆಶಿ ಭಾಗಿ: ಪ್ರಜ್ಞಾ ಓಡಿಲ್ನಾಳ ನಿರೂಪಣೆ..!!

September 28, 2026

Leave a Reply Cancel reply

Your email address will not be published. Required fields are marked *

Recent News

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

October 1, 2026
ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

October 1, 2026
ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

October 1, 2026
ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.