ವಿಟ್ಲ : ವಿಷ್ಣುಮೂರ್ತಿ ಗೆಳೆಯರ ಬಳಗ ಕೊಲ್ಲಪದವು ಆಶ್ರಯದಲ್ಲಿ ಶ್ರೀ ಗಣೇಶ ಚತುರ್ಥಿಯ ಅಂಗವಾಗಿ 7ನೇ ವರುಷದ ಕ್ರೀಡೋತ್ಸವ-2023 ಅ.8 ರಂದು ಕೊಲ್ಲಪದವು ವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಲಿದೆ.
ಬೆಳಿಗ್ಗೆನಿಂದ ಸಂಜೆಯವರೆಗೆ ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಸಂಜೆ ವೇಳೆ ಸಮಾರೋಪ ಸಮಾರಂಭ ನಡೆಯಲಿದ್ದು, ವಾರನಾಶಿ ಫಾರ್ಮ್ ಡೈರೆಕ್ಟರ್ ಭಾರತ ಈಜು ತಂಡದ ತರಬೇತುದಾರರಾದ ಪಾರ್ಥ ವಾರನಾಶಿ ರವರು ಅಡ್ಯನಡ್ಕ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್ ರವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
ನಿವೃತ್ತ ಶಿಕ್ಷಕರಾದ ರತ್ನಾಕರ್ ಭಟ್ ಬೆಟ್ಟುಗದ್ದೆ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಬಜರಂಗದಳ ವಿಟ್ಲ ಪ್ರಖಂಡದ ಸಂಚಾಲಕರಾದ ಚೇತನ್ ಕಡಂಬು, ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಘವ ಮಣಿಯಾಣಿ ಸಾರಡ್ಕ, ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶೋಧ ರವರು ಅತಿಥಿಗಳಾಗಿ ಆಗಮಿಸಲಿದ್ದಾರೆ.



























