ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ಭಾರತೀಯ ಸೇನೆಯಲ್ಲಿ ಅಗ್ನಿವೀರ್ಗೆ ಸೇರ್ಪಡೆಯಾದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಭವಿಷ್ಯ್ ಗೆ ಅಭಿನಂದನಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲ️ಕರಾದ ಗೋಕುಲ್ನಾಥ್.ಪಿ.ವಿ ರವರು ಭವಿಷ್ ರವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿ ಭವಿಷ್ ಮಾತನಾಡುತ್ತಾ ತಾನು ಅಗ್ನಿವೀರ್ಗೆ ಆಯ್ಕೆಯಾದ ಬಗ್ಗೆ ಹಾಗೂ ತನ್ನ ಪರಿಶ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ನಮ್ಮ ಜೀವನದಲ್ಲಿ ಗುರಿ ಇರಬೇಕು ಹಾಗೂ ಅದನ್ನು ಸಾಧಿಸುವ ಛಲ️ವೂ ಇರಬೇಕು ಎಂದು ಹೇಳುತ್ತಾ ತನ್ನನ್ನು ಗೌರವಿಸಿದ ಸಂಸ್ಥೆಯ ಸಂಚಾಲ️ಕರಿಗೆ ಹಾಗೂ ಪ್ರಾಂಶುಪಾಲ️ರಿಗೆ ಧನ್ಯವಾದವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲ️ರಾದ ಹೇಮಲ️ತಾ ಗೋಕುಲ್ನಾಥ್, ಮುಖ್ಯ ಶಿಕ್ಷಕಿ ಪ್ರಮೀಳಾ.ಎನ್.ಡಿ, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

























