ಪುತ್ತೂರು: ಪುತ್ತೂರು ಜಾತ್ರೆಯಲ್ಲಿ ಮನರಂಜನೆ ತೋರಿಸಲು ಬಂದು ಕೋವಿಡ್ -19 ಜನತಾ ಕರ್ಫ್ಯೂವಿನಿಂದ ಇಲ್ಲೇ ಲಾಕ್ ಆಗಿರುವ ಜಾಯಿಂಟ್ ವೀಲ್ ಕುಟುಂಬದ ಹಸಿವಿನ ನೋವಿಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್ ಅವರು ಸ್ಪಂದಿಸಿ ಮೇ.13ರಂದು ಅಗತ್ಯ ದಿನಸಿ ಸಾಮಾಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಿಸಿಲಿರಲಿ, ಮಳೆಯಿರಲಿ ನಿತ್ಯ ಸಂಚಾರ ನಿಯಂತ್ರಣದೊಂದಿಗೆ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡುತ್ತಿರುವ ಸಂಚಾರ ಪೊಲೀಸರು ಲಾಕ್‌ಡೌನ್ ಸಮಯದಲ್ಲಿ ತಮಗೆ ಸಿಕ್ಕಿದ ಅನ್ನವನ್ನು ಬಿಕ್ಷುಕರಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದು, ಇದೀಗ ಪುತ್ತೂರು ಜಾತ್ರಾ ಗದ್ದೆಯ ಬದಿಯಲ್ಲಿರುವ ಖಾಸಗಿ ಗದ್ದೆಯಲ್ಲಿ ಬೀಡು ಬಿಟ್ಟಿರುವ ಸುಮಾರು 36 ಮಂದಿಯ 4 ಕುಟುಂಬದ ಹಸಿವನ್ನು ನೀಗಿಸುವಲ್ಲಿ ಮುಂದಾಗಿದ್ದು, ಸಂಚಾರ ಪೊಲೀಸರು 50 ಕೆ.ಜಿ ಅಕ್ಕಿ, 20 ಕೆ.ಜಿ ಗೋದಿ, ಉಪ್ಪಿನಕಾಯಿ, ತರಕಾರಿ, ನೀರುಳ್ಳಿ, ಉಪ್ಪು, ಬಿಸ್ಕಟ್ ಸೇರಿದಂತೆ ಹಲವು ಅಗತ್ಯ ಸಾಮಾಗ್ರಿಗಳನ್ನು ಪೂರೈಸಿದ್ದಾರೆ. ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಚಂದ್ರಶೇಖರ್, ಸ್ಕರೀಯ, ಪ್ರಶಾಂತ್ ರೈ, ಗೃಹರಕ್ಷಕದಳದ ಸಿಬ್ಬಂದಿ ಉಪಸ್ಥಿತರಿದ್ದರು.