ಪುತ್ತೂರು : ನಗರಸಭಾ ವಾಹನ ಚಾಲಕರು ಹಾಗೂ ಸಿಬ್ಬಂದಿ ಸೇರಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರ ತೆರವು ಗೊಳಿಸಿದರು.
ದರ್ಬೆ ಬೈಪಾಸ್ ರಸ್ತೆಯಲ್ಲಿ ಗಾಳಿಯ ರಭಸಕ್ಕೆ ಮರ ವೊಂದು ರಸ್ತೆಗೆ ಅಡ್ಡದಾಗಿ ಬಿದ್ದಿತ್ತು . ವಿಷಯ ತಿಳಿದು ಕೂಡಲೇ ನಗರಸಭಾ ವಾಹನ ಚಾಲಕರಾದ ರಾಧಾಕೃಷ್ಣ ಬಲ್ನಾಡು, ಸದಾಂ ಹುಸೇನ್ ಹಾಗೂ ಪೌರ ಕಾರ್ಮಿಕ ಹನುಮಂತ ಸ್ಥಳಕ್ಕೆ ತೆರಳಿ ಮರವನ್ನು ತೆರವು ಗೊಳಿಸಿದರು.