ಮಂಗಳೂರು : ಜಿಲ್ಲಾ ಆರೋಗ್ಯ ಇಲಾಖೆಯೂ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಮತ್ತು ಹೊಸ ತಾಯಂದಿರಿಗಾಗಿ ಮಂಗಳೂರಿನ ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಹೆಚ್ಚುವರಿ 14 ಹಾಸಿಗೆಗಳ ವಾರ್ಡ್ ನ್ನು ಮೀಸಲಿರಿಸಿದೆ.
ಕಳೆದ ಒಂದು ವಾರದಲ್ಲಿ, ಕೊರೊನಾ 25 ಗರ್ಭಿಣಿಯರಲ್ಲಿ ಮತ್ತು ಹೊಸ ತಾಯಂದಿರಲ್ಲಿ ಕಾಣಿಸಿಕೊಂಡಿದ್ದು, ಇವರ್ಯಾರೂ ರೋಗ ಲಕ್ಷಣಗಳನ್ನು ಹೊಂದಿಲ್ಲ ಅನ್ನುವುದು ವಿಶೇಷ .ಈ ರೋಗಿಗಳ ಆರೋಗ್ಯದ ಮೇಲ್ವಿಚಾರಣೆಗಾಗಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ಸಹಾಯಕರ ಮೂಲಕ ಈ ರೋಗಿಗಳನ್ನು ಪರಿಶೀಲಿಸಲಾಗುತ್ತದೆ ಇದಲ್ಲದೆ ಎರಡು ನವಜಾತ ಶಿಶುಗಳಿಗೆ ಸೋಂಕು ದೃಢಪಟ್ಟಿದೆ ಎಂದು ಲೇಡಿ ಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ ಪ್ರಸಾದ್ ಎಂ.ಆರ್. ಮಾಹಿತಿ ನೀಡಿದ್ದಾರೆ.
‘ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಕೊಠಡಿ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ ಹೊಂದಿದ್ದು. ಈಗ ಗರ್ಭಿಣಿಯರಿಗೆ 25 ಹಾಸಿಗೆಗಳಿವೆ. ಕೋವಿಡ್-ಶಂಕಿತ ರೋಗಿಗಳಿಗೆ ನಾವು ಇನ್ನೂ 14 ಹಾಸಿಗೆಗಳನ್ನು ಸೇರ್ಪಡೆಗೊಳಿಸಿದ್ದೇವೆ. ಮೇ 1 ಮತ್ತು 12 ರ ನಡುವೆ 200 ಕ್ಕೂ ಹೆಚ್ಚು ಮಹಿಳೆಯರು ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದರು, ಅದರಲ್ಲಿ 29 ಮಹಿಳೆಯರು ಗರ್ಭಿಣಿಯರು ಮತ್ತು ಹೊಸ ತಾಯಂದಿರಲ್ಲಿ ಪಾಸಿಟಿವ್ ಕಂಡು ಬಂದಿದೆ “ಎಂದು ದುರ್ಗಾ ಪ್ರಸಾದ್ ಅವರು ಹೇಳಿದರು.