ಸದಾ ಹೊಸತನವನ್ನು ಪರಿಚಯಿಸುತ್ತಿರುವ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಮುಳಿಯ ಇ-ಕಾಮರ್ಸ್ “ವರ್ಚುವಲ್ ಸೇಲ್ಸ್” ಮೇ. ೧೦ ರಿಂದ ಪ್ರಾರಂಭಗೊಂಡಿದೆ.
ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ನ ಗ್ರಾಂಡ್ ಲಾಂಚ್ ಕಾರ್ಯಕ್ರಮವನ್ನು ಮೇ. ೧೨ರಂದು ಬಾಗಲಕೋಟೆ ಜಿಲ್ಲೆಯ, ಭಾರತದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಸಕ್ಕರೆ ಕಾರ್ಖಾನೆಗಳ ಬೆಳಗಿ ಸಮೂಹದ ನಿರ್ದೇಶಕರಾದ ವಿಜಯ್ ನಿರಾಣಿ ಇವರು ವಿದ್ಯುಕ್ತವಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಅತಿಥಿ ಮತ್ತು ಗ್ರಾಹಕರಾದ ಶಂಕರನಾರಾಯಣ ಭಟ್ ಸಾರಡ್ಕರವರು ಮಾತನಾಡಿ ಮುಳಿಯದ ಈ ವಿಶೇಷ ಸಂಭ್ರಮ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಿ ಕೊರೋನಾ ಕಷ್ಟದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಇದೊಂದು ಸೂಕ್ತ ವೇದಿಕೆ. ಅದೇ ರೀತಿ ಈ ವ್ಯವಸ್ಥೆ ಕಲ್ಪಿಸಿದ ಮುಳಿಯ ಸಂಸ್ಥೆಗೆ ಶುಭವನ್ನು ಹಾರೈಸಿದರು. ಗ್ರಾಹಕರಾದ ಜೀವನ್ ಉಪ್ಪಳಿಗೆ ಇವರು ಮಾತನಾಡಿ ಮುಳಿಯ ಜ್ಯುವೆಲ್ಸ್ ಕೊರೋನಾ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತದೆ. ಇದು ಒಂದು ಮೆಚ್ಚುಗೆಯ ವಿಷಯ ಎಂದು ಹೇಳಿದರು.
ಸಂಸ್ಥೆಯ ಚೇರ್ಮೇನ್ ಮತ್ತು ಆಡಳಿತ ನಿರ್ದೇಶಕರಾದ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ ಕೊರೋನಾಸಂದರ್ಭದಲ್ಲಿ ನಾವು ಹಲವಾರು ಸಾಮಾಜಿಕ ಕಾರ್ಯಗಳನ್ನು
ಹಮ್ಮಿಕೊಂಡಿದ್ದು, ಇದೇ ರೀತಿ ಗ್ರಾಹಕರು ಮನೆಯಲ್ಲೇ ಕುಳಿತು ಆಭರಣ ಖರೀದಿ ಮಾಡಲು ಮುಳಿಯ ಇ-ಕಾಮರ್ಸ್ ಎಂಬ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದರಿಂದ ಗ್ರಾಹಕರಿಗೆ ಅನೇಕ
ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದರು. ಇದೇ ಮೇ ೧೪ ಅಕ್ಷಯ ತೃತೀಯ ಶುಭ ದಿನದಂದು ಚಿನ್ನಾಭರಣಗಳನ್ನು ಖರೀದಿಸಲು ಮುಳಿಯದ ಈ ವರ್ಚುವಲ್ ಕೌಂಟರ್ನ ಸದುಪಯೋಗ ಪಡೆಸಿಕೊಳ್ಳಬಹುದೆಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ತಿಳಿಸಿರುತ್ತಾರೆ.
ಓನ್ಲೈನ್ ಸೇಲ್ಸ್ ಮ್ಯಾನೇಜರ್ ಲತಾ ಯತೀಶ್ರವರು ಕಾರ್ಯಕ್ರಮ ನಿರೂಪಿಸಿದರು. ಮಾರ್ಕೇಟಿಂಗ್ ಕನ್ಸ್ಲ್ಟೆಂಟ್ ಶ್ರೀ ವೇಣುಶರ್ಮರವರು ಪ್ರಾಸ್ತಾವನೆ ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಪುಷ್ಪರಾಜ್ಧ ನ್ಯವಾದ ಹೇಳಿದರು. ಭವ್ಯಶ್ರೀ ರವರು ಪ್ರಾರ್ಥಿಸಿದರು. ಸಂಜೀವರವರು ಸಹಕರಿಸಿದರು.
ಮುಳಿಯ ಇ-ಕಾಮರ್ಸ್ನ ಸೇಲ್ಸ್ನ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು browse.muliya.in ಗೆ login ಆಗಬಹುದು ಮತ್ತು 9353030916, 18004252916 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.