ಪುತ್ತೂರು : ಶಾಸಕ ಸಂಜೀವ ಮಠಂದೂರು ರವರ ಪ್ರೇರಣೆಯಂತೆ ಮಹಾಲಿಂಗೇಶ್ವರ ಸಭಾಭವನದಲ್ಲಿ ಕೋವಿಡ್ ತಾತ್ಕಾಲಿಕ ಉಪಚಾರ ಕೇಂದ್ರ ಸಿದ್ಧಗೊಳ್ಳುತ್ತಿದ್ದು ದೇವಳದ ನಿತ್ಯ ಕರಸೇವಕರು ಹಾಲ್ ಅನ್ನು ಸಂಪೂರ್ಣ ಸ್ವಚ್ಛಗೊಳಿಸಿ ಮಂಚಗಳನ್ನ ತಂದು ಶೇಡ್ ನೆಟ್ ಕವರ್ ಮಾಡಿ ಸಿದ್ಧಪಡಿಸಿದ್ದಾರೆ.
ವಿದ್ಯುತ್ ವ್ಯವಸ್ಥೆ ಸೋಮವಾರ ಮಾಡಲಾಗುತ್ತಿದ್ದು, 40 ಜನರಿಗೆ ವಸತಿ, 6 ಶೌಚಾಲಯ + 6 ಸ್ನಾನ ಗೃಹ , ಊಟೋಪಹಾರ ವ್ಯವಸ್ಥೆ ಇಲ್ಲಿ ಇರಲಿದೆ. ಮುಂದಿನ ಬುಧವಾರ ಗುರುವಾರ ದಿಂದ ಈ ಕೋವಿಡ್ ತಾತ್ಕಾಲಿಕ ಉಪಚಾರ ಕೇಂದ್ರ ಸೇವೆಗೆ ಲಭ್ಯವಿದೆ.
ಈಗಾಗಲೇ ಮನೆಯಲ್ಲಿ ಇರುವ ಗುಣಲಕ್ಷಣಗಲಿಲ್ಲದ ಸೋಂಕಿತರು , ಮನೆಯಲ್ಲಿ ಪ್ರತ್ಯೇಕ ವಾಗಿರಲು ವ್ಯವಸ್ಥೆ ಇಲ್ಲದಿದ್ದಾಗ ಹಾಗೂ ಆರ್ಥಿಕವಾಗಿ ಹಿಂದುಳಿದ ಹಿಂದೂಭಾಂದವರಿಗೆ ಇಲ್ಲಿ ಉಳಕೊಳ್ಳಬಹುದು ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.