ಪುತ್ತೂರು: ಪುತ್ತೂರು ಪೇಟೆಯನ್ನು ಪ್ರವೇಶ ಮಾಡುವ ಮಂಜಲ್ಪಡ್ಡು ಭಾಗದಲ್ಲಿ ನಗರಸಭೆಯಿಂದ ಯು ಆರ್ ಪ್ರಾಪರ್ಟೀಸ್‌ನ ಗುತ್ತಿಗೆಯ ಮೂಲಕ ರೂ.13ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಡಿಜಿಟಲ್ ಜಾಹೀರಾತು ಫಲಕ, ಕ್ಲಾಕ್ ಟವರ್ ಹಾಗೂ ರೂ.4 ಲಕ್ಷ ವೆಚ್ಚದ ಹೈಮಾಸ್ಟ್ ಲೈಟ್ ಅನ್ನು ಶಾಸಕ ಸಂಜೀವ ಮಠಂದೂರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕರು, ದಿನ ನಿತ್ಯದ ವ್ಯವಹಾರ
ಕುದುರಿಸಲು ಜಾಹೀರಾತು ಅವಶ್ಯಕ. ಅಗತ್ಯಕ್ಕೆ ತಕ್ಕಂತೆ ಪುತ್ತೂರು ನಗರಕ್ಕೆ ಪ್ರವೇಶ ಮಾಡುವ ಸ್ಥಳದಲ್ಲಿ ಇದನ್ನು ಸೂಕ್ತವಾಗಿ ಅಳವಡಿಸಿದ್ದರಿಂದ ನಗರಸಭೆಯ ವಿಚಾರಗಳು, ಕೋವಿಡ್ ಸಂಬಂಧಿಸಿ ಮುನ್ನೆಚ್ಚರಿಕೆಗಾಗಿ ಕೈಗೊಳ್ಳುವ ಕ್ರಮಗಳ ಮಾಹಿತಿ ಇಲ್ಲಿ ಉಚಿತವಾಗಿ ಬರಲಿದೆ.
ಇದರ ಜೊತೆಗೆ ನಿಗದಿತ ದರದಲ್ಲಿ ಜಾಹೀರಾತು ನೀಡಲು ಅವಕಾಶವಿದೆ.ಇಂತಹ ಜನಪರ, ಅಭಿವೃದ್ಧಿ ಪರ ಕಾರ್ಯ ಪುತ್ತೂರಿನ ಸುಂದರತೆಯನ್ನು ಹೆಚ್ಚಿಸಲಿದೆ ಎಂದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭಾ ಸದಸ್ಯರಾದ ಪ್ರೇಮಲತಾ ನಂದೀಲ, ಶಿವರಾಮ ಸಪಲ್ಯ, ವಸಂತ ಕಾರೈಕ್ಕಾಡು, ಯಶೋದಾ
ಹರೀಶ್, ಪಿ.ಜಿ.ಜಗನ್ನಿವಾಸ ರಾವ್, ಮೆಸ್ಕಾಂ ಇಂಜಿನಿಯರ್ ರಾಮಚಂದ್ರ, ನವೀನ್, ಯು.ಆರ್ ಪ್ರಾಪರ್ಟೀಸ್‌ನ ಸದೇರ್ ಆನಂದ್, ಇಂಜಿನಿಯರ್ ಗಣೇಶ್ ಕೃಷ್ಣ, ನಗರಸಭೆ
ಕಾರ್ಯಪಾಲಕ ಅಭಿಯಂತರ ಅರುಣ್ ಉಪಸ್ಥಿತರಿದ್ದರು.