ಮುಂಡೂರು ಗ್ರಾಮದ ನರಿಮೊಗರು ಕಾಳಿಂಗಹಿತ್ತಲು ಎಂಬಲ್ಲಿ ರಹಿಮಾನ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮಣ್ಣು ಪಾಲಾಗಿದ್ದು, ಇದರಿಂದಾಗಿ ಮನೆಯ ಜಗಲಿ ಕೂಡ ಬಿರುಕು ಬಿಟ್ಟಿದ್ದು, ಮನೆ ಕೂಡ ಕುಸಿಯುವ ಭೀತಿಯಲ್ಲಿದೆ.
ಈಗಾಗಲೇ ಹಿಂದೂ ಮುಖಂಡ ಅರುಣ್ ಪುತ್ತಿಲ, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಪುತ್ತಿಲ,ಬಾಲಕೃಷ್ಣ ಪೂಜಾರಿ,ಅರುಣಾ ಕಣ್ಣರ್ನೂಜಿ,ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್,ಜನಾರ್ದನ ಪೂಜಾರಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ,ಪ್ರಮುಖ ಹಿಂದೂ ಬಾಂಧವರು ಹಾಗೂ ಸ್ಥಳೀಯರು ಕಲ್ಲು ತೆರವು ಗೊಳಿಸಿ, ತಕ್ಷಣಕ್ಕೆ ಮನೆಗೆ ತೊಂದರೆ ಯಾಗದಂತೆ ಕೆಲಸ ನಿರ್ವಹಿಸುತ್ತಿದ್ದು ಪಂಚಾಯತ್ ಅಧ್ಯಕ್ಷೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಮೇಲಾಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ರಹಿಮಾನ್ ಅವರಿಗಾದ ಈ ತೊಂದರೆಗೆ ಅಧಿಕಾರಿಗಳು ತಕ್ಷಣ ಪರಿಹಾರ ನೀಡಿ, ಮುಂದೆ ಮನೆಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಾದ ಅಗತ್ಯತೆ ಇದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.