ಪುತ್ತೂರು : ಪ್ರಗತಿ ಸ್ಟಡಿ ಸೆಂಟರ್ ವತಿಯಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಡಿ.17 ರಂದು ಬೆಳಗ್ಗೆ ಜೈನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ವಿವರ : ದೇಶಭಕ್ತಿ ಗೀತೆ(ಸಮೂಹ), ಜಾನಪದ ನೃತ್ಯ (ಸಮೂಹ), ಮೌಲ್ಯಾಧಾರಿತ ಹಾಸ್ಯ ಪ್ರಧಾನ ನಾಟಕ, ದೇಶಭಕ್ತಿ ನೃತ್ಯ ರೂಪಕ, ನಿರೂಪಣೆ.
ಮೊದಲು ನೊಂದಾಯಿಸಿದ ಪ್ರೌಢಶಾಲಾ ವಿಭಾಗದ 8 ತಂಡ ಹಾಗೂ, ಹಿರಿಯ ಪ್ರಾಥಮಿಕ ವಿಭಾಗದ 8 ತಂಡಗಳಿಗೆ ಮಾತ್ರ ಅವಕಾಶ, ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಮಿತಿ ಇರುವುದಿಲ್ಲ, ಭಾಗವಹಿಸುವ ವಿದ್ಯಾರ್ಥಿಗಳ ಹೆಸರು, ತರಗತಿ, ಭಾಗವಹಿಸುವ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯನ್ನು ನ.27 ರ ಒಳಗಾಗಿ ಸಂಸ್ಥೆಯ ವಾಟ್ಸಾಪ್ ಸಂಖ್ಯೆ 9448536143 ತಿಳಿಸತಕ್ಕದ್ದು, ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ಸರಕಾರಿ/ಅನುದಾನಿತ/ಖಾಸಗಿ ಶಾಲೆಗಳಿಗೆ ಮುಕ್ತ ಅವಕಾಶ.
ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದೆ, ಪ್ರತಿ ಶಾಲೆಗಳಿಗೆ 30 ನಿಮಿಷ ಕಾಲಾವಕಾಶ ನೀಡಲಾಗುವುದು, ಸ್ಪರ್ಧಿಗಳೇ ವೇಷಭೂಷಣ ಧರಿಸಿ ಬರತಕ್ಕದ್ದು, ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆಗೆ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರತಿ ಶಾಲೆಗಳಿಗೆ ಸ್ಮರಣಿಕೆಯನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























