ಪುತ್ತೂರು : ಪೊಲೀಸ್ ಸಿಬ್ಬಂದಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಸಂಚಾರ ಠಾಣೆಯ ಸಿಬ್ಬಂದಿ ಶಿವಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಹರೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ನ.16 ರಂದು ಸಂಜೆ ಪುತ್ತೂರು ಸಂಚಾರ ಠಾಣೆಯ ಸಿಬ್ಬಂದಿ ಶಿವಪ್ರಸಾದ್ ರವರು, ಇಲಾಖಾ ವಾಹನ ಚಾಲಕ ಹನುಮಂತರೊಂದಿಗೆ, ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿರುವ ಸಮಯ, ಸಾರ್ವಜನಿಕರಿಂದ ದೂರು ಬಂದ ಮೇರೆಗೆ ಪುತ್ತೂರು ಮಿನಿ ವಿಧಾನ ಸೌಧದ ಬಳಿ, ಇಬ್ಬರು ಮಕ್ಕಳೊಂದಿಗೆ ನಿಂತಿದ್ದ ಮಹಿಳೆಯೋರ್ವರನ್ನು ವಿಚಾರಿಸುತ್ತಿದ್ದಾಗ, ಸದರಿ ಮಹಿಳೆಯ ಪತಿ ಹರೀಶ್ ಎಂಬಾತನು ಅಲ್ಲಿಗೆ ಬಂದು ಸಮವಸ್ತ್ರದಲ್ಲಿದ್ದ ಶಿವಪ್ರಸಾದ್ ಮತ್ತು ವಾಹನ ಚಾಲಕ ಹನುಮಂತ ರನ್ನು ಅವ್ಯಾಚವಾಗಿ ಬೈದಿದ್ದು, ಬಳಿಕ ಜಲ್ಲಿ ಕಲ್ಲನ್ನು ಕೈಯಲ್ಲಿ ಹಿಡಿದು ಆತನ ಪತ್ನಿಯೊಂದಿಗೆ ನಿಂತಿದ್ದ ಮಕ್ಕಳಿಗೆ ಹಲ್ಲೆ ನಡೆಸಲು ಯತ್ನಿಸಿರುತ್ತಾನೆ.
ಈ ವೇಳೆ ಪೊಲೀಸ್ ಸಿಬ್ಬಂದಿ ಶಿವಪ್ರಸಾದ್ ರವರು ಸದ್ರಿ ವ್ಯಕ್ತಿಯನ್ನ ತಡೆಯಲು ಮುಂದಾದಾಗ, ಆತನು ಕೈಯ್ಯಲ್ಲಿದ್ದ ಜಲ್ಲಿ ಕಲ್ಲಿನಿಂದ ಶಿವಪ್ರಸಾದ್ ರವರ ಹಣೆಗೆ ಹಾಗೂ ತಲೆಗೆ ಗಾಯಗೊಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 111-2023, ಕಲಂ:504,332,353 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.