ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳ, ಬಾಡಿ ಶೇಮಿಂಗ್ ಅನ್ನೋದರ ಬಗ್ಗೆ ಆಗಾಗ ಕೇಳಿರುತ್ತೇವೆ. ಆದ್ರೆ ಇದ್ಯಾವುದು ಬಹಿರಂಗವಾಗಿ ಚರ್ಚೆ ಆಗಿದ್ದು, ತೀರಾ ಕಡಿಮೆ. ಆದ್ರೀಗ ನಟನೊಬ್ಬ ಸ್ಟಾರ್ ನಟಿ ಬಗ್ಗೆ ಓಪನ್ ಆಗಿ ಕಾಮೆಂಟ್ ಮಾಡಿರೋದು ನಿಜಕ್ಕೂ ಅಚ್ಚರಿ ತಂದಿದೆ. ಅದರಲ್ಲೂ ತ್ರಿಷಾ ಅಂತಹ ಖ್ಯಾತ ನಟಿ ಬಗ್ಗೆ ಇಷ್ಟು ಕೀಳಾಗಿ ಮಾತಾಡಿರೋದು ಇಂಡಸ್ಟ್ರಿಗೆ ಶಾಕ್ ಕೊಟ್ಟಿದೆ.
ಸೌತ್ ಸೆನ್ಸೇಷನ್ ನಟಿ ತ್ರಿಷಾ ಬಗ್ಗೆ ತಮಿಳಿನ ಖ್ಯಾತ ನಟ ಮನ್ಸೂರ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ತ್ರಿಷಾ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ನಟಿಯ ಬಗ್ಗೆ ಬಹಳ ಕೀಳಾಗಿ ಮಾತಾಡಿದ್ದಾರೆ. ಮನ್ಸೂರ್ ಅಲಿ ಖಾನ್ ಹೇಳಿಕೆ ಈಗ ಸಿನಿಮಾ ಜಗತ್ತಿನಲ್ಲಿ ಕೋಲಾಹಲ ಸೃಷ್ಟಿಸಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗ್ತಿದೆ. ಸಿನಿಮಾ ಇಂಡಸ್ಟ್ರಿಯಲ್ಲಿ ತ್ರಿಷಾ ಕ್ಲೀನ್ ಇಮೇಜ್ ಮೇಂಯ್ಟನ್ ಮಾಡಿದ್ದಾರೆ. ಯಾವುದೇ ಕಾಂಟ್ರುವರ್ಸಿಗಳನ್ನ ಮೈ ಮೇಲೆ ಎಳೆದುಕೊಂಡಿಲ್ಲ. ಲವ್, ರಿಲೇಶನ್ಷಿಪ್ ವಿಚಾರದಲ್ಲಿ ಆಗಾಗ ಲಿಂಕ್ ಅಪ್ಗಳು ಕೇಳಿ ಬಂತಾದರೂ ತನ್ನ ಹೆಸರಿಗೆ ಹಾಗೂ ವ್ಯಕ್ತಿತ್ವಕ್ಕೆ ಯಾವುದೇ ಡ್ಯಾಮೇಜ್ ಮಾಡಿಕೊಂಡಿರಲ್ಲ. ಸೋ, ಕೆರಿಯರ್ ಉದ್ದಕ್ಕೂ ಸ್ಟಾರ್ ಡಮ್, ಫ್ಯಾನ್ಬೇಸ್ ಉಳಿಸಿಕೊಂಡಿರುವ ನಟಿ ಬಗ್ಗೆ ಮನ್ಸೂರ್ ಅಲಿ ಖಾನ್ ನಾಲಿಗೆ ಹರಿಬಿಟ್ಟಿರೋದು ನಿಜಕ್ಕೂ ಅಚ್ಚರಿ ಕಾರಣವಾಗಿದೆ.
ತ್ರಿಷಾ ಜೊತೆ ಬೆಡ್ರೂಮ್ ಸೀನ್ ಮಾಡಬೇಕಿತ್ತಂತೆ ಆ ನಟ!
ತ್ರಿಷಾ ಜೊತೆ ಮನ್ಸೂರ್ ಅಲಿ ಖಾನ್ ಬೆಡ್ರೂಮ್ ಸೀನ್ ಮಾಡಬೇಕಿತ್ತಂತೆ. ತ್ರಿಷಾರನ್ನು ಎತ್ತಿಕೊಂಡು ಹೋಗಿ ಬೆಡ್ ಮೇಲೆ ಹಾಕಬೇಕಿತ್ತು ಅಂತ ಮನ್ಸೂರ್ ಸಂದರ್ಶನವೊಂದರಲ್ಲಿ ಹೇಳ್ಕೊಂಡಿದ್ದಾರೆ. ಮನ್ಸೂರ್ ಅವರ ಈ ಹೇಳಿಕೆ ಈಗ ಸಿನಿಮಾ ಮಂದಿಯ ಕೋಪಕ್ಕೆ ಕಾರಣವಾಗಿದೆ.
ಮಾನ್ಸೂರ್ ಅಲಿ ಹೇಳಿದ್ದೇನು?
‘ನಾನು ತ್ರಿಶಾ ಜೊತೆ ಆಕ್ಟ್ ಮಾಡುತ್ತಿದ್ದೇನೆ ಎಂದು ಗೊತ್ತಾದಾಗ, ಆ ಸಿನಿಮಾದಲ್ಲಿ ಬೆಡ್ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ. ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಭಾವಿಸಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುವ ದೃಶ್ಯವಿತ್ತು. ನಾನು ಸಿಕ್ಕಪಟ್ಟೆ ರೇಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ ಈ ಸಿನಿಮಾದಲ್ಲಿ ಹಾಗೇನು ಇರಲ್ಲಿಲ್ಲ. ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ಆಕೆಯನ್ನು ತೋರಿಸಲಿಲ್ಲ’
– ಮನ್ಸೂರ್ ಅಲಿ ಖಾನ್
ತ್ರಿಷಾ ಜೊತೆ ಆ್ಯಕ್ಟ್ ಮಾಡುತ್ತಿದ್ದೇನೆ ಎಂದಾಗ ಬೆಡ್ರೂಮ್ ಸೀನ್ ಅಂದ್ಕೊಂಡ್ರಂತೆ. ಅಷ್ಟೇ ಅಲ್ಲ ಅದು ರೇಪ್ ಸೀನ್ ಆಗಿರಬಹುದೇನೂ ಅಂತಾನೂ ಅಂದ್ಕೊಂಡ್ರಂತೆ. ಆದ್ರೆ ಜೊತೆ ಆ್ಯಕ್ಟ್ ಮಾಡೋದಿರಲಿ, ಆಕೆಯ ಮುಖವನ್ನ ಸಹ ತೋರಿಸಲಿಲ್ಲ ಅಂತ ಹೇಳ್ಕೊಂಡಿದ್ದಾರೆ. ಮನ್ಸೂರ್ ಅವ್ರ ಹೇಳಿಕೆ ಈಗ ನಟಿಯ ಆಕ್ರೋಶಕ್ಕೆ ಕಾರಣವಾಗಿದೆ. ಸಹ ನಟನೊಬ್ಬ ಈ ರೀತಿ ಮೋಹಿಸಿ ಮಾತಾಡೋದು ಸರಿಯಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಇಂಥ ನಟನ ಜೊತೆ ಇನ್ಯಾವತ್ತೂ ನಟಿಸೋದು ಇಲ್ಲ ಅಂತ ಟ್ವೀಟ್ ಮಾಡಿದ್ದಾರೆ. ಮನ್ಸೂರ್ ಅಲಿ ಖಾನ್ ಸ್ಟೇಟ್ಮೆಂಟ್ ವೈರಲ್ ಆಗುತ್ತಿದ್ದ ಹಾಗೇ ಸಾಕಷ್ಟು ಚರ್ಚೆಯಾಗ್ತಿದೆ. ತ್ರಿಷಾ ಕುರಿತು ಮನ್ಸೂರ್ ಹೇಳಿದ್ದು ತಪ್ಪು ಎನ್ನುವ ಅಭಿಪ್ರಾಯ ವ್ಯಕ್ತವಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಮನ್ಸೂರ್ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದಾರೆ. ಹಿಗ್ಗಾಮುಗ್ಗಾ ಕ್ಲಾಸ್ ತಗೊಳ್ತಿದ್ದಾರೆ. ಇದ್ರ ಜೊತೆ ತ್ರಿಷಾ ಕೂಡ ರಿಯಾಕ್ಟ್ ಮಾಡಿ ಗರಂ ಆಗಿದ್ದಾರೆ.
ಮನ್ಸೂರ್ ವಿರುದ್ಧ ತ್ರಿಷಾ ಗರಂ
‘ಇತ್ತೀಚಿನ ವೀಡಿಯೊವೊಂದು ನನ್ನ ಗಮನಕ್ಕೆ ಬಂದಿದೆ. ಅಲ್ಲಿ ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯಕರವಾಗಿ ಮಾತನಾಡಿದ್ದಾರೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಇದು ಲೈಂಗಿಕತೆ, ಅಗೌರವ, ಸ್ತ್ರೀದ್ವೇಷ, ವಿಕರ್ಷಣ ಮತ್ತು ಕೆಟ್ಟ ಅಭಿರುಚಿಯಾಗಿದೆ. ಅವರಂತಹ ವ್ಯಕ್ತಿಯೊಂದಿಗೆ ನಟಿಸದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಭವಿಷ್ಯದಲ್ಲಿಯೂ ನಾನು ಇಂಥವರೊಂದಿಗೆ ನಟಿಸದಂತೆ ನೋಡಿಕೊಳ್ಳುತ್ತೇನೆ. ಅವರಂತಹ ಜನರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ’
-ನಟಿ ತ್ರಿಷಾ
ಮನ್ಸೂರ್ ವಿರುದ್ಧ ಲಿಯೋ ಡೈರೆಕ್ಟರ್ ಲೋಕೇಶ್ ಫೈರ್!
ಮನ್ಸೂರ್ ಅಲಿ ಖಾನ್ ಅವರ ಈ ಹೇಳಿಕೆಗೆ ಲಿಯೋ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಮನ್ಸೂರ್ ಅಲಿ ಖಾನ್ ಅವರು ಮಾಡಿದ ಸ್ತ್ರೀದ್ವೇಷದ ಕಾಮೆಂಟ್‌ಗಳು ತೀವ್ರ ಬೇಜಾರು ತರಿಸಿದೆ ಮತ್ತು ಕೋಪವೂ ತರಿಸಿದೆ. ಮಹಿಳೆಯರು, ಸಹ ಕಲಾವಿದರು ಮತ್ತು ವೃತ್ತಿಪರರಿಗೆ ಯಾವುದೇ ಗೌರವವಿಲ್ಲದ ಮಾತಾಡೋರಿಗೆ ನನ್ನ ಬೆಂಬಲ ಇಲ್ಲ ಹಾಗೂ ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ”
-ಲಿಯೋ ಡೈರೆಕ್ಟರ್ ಲೋಕೇಶ್ ಕನಕರಾಜ್
ಮನ್ಸೂರ್ ಅಲಿ ಖಾನ್ ಬಗ್ಗೆ ಇಂಡಸ್ಟ್ರಿಯಲ್ಲೂ ಒಳ್ಳೆ ಅಭಿಪ್ರಾಯವಿಲ್ಲ. ಒಳ್ಳೆ ಕಲಾವಿದ, ಚೆನ್ನಾಗಿ ನಟಿಸ್ತಾರೆ ಅನ್ನೋದು ಬಿಟ್ಟರೆ ಪರ್ಸನಲ್ ಆಗಿ ಯಾವ ನಟರ ಜೊತೆಯೂ ಅಷ್ಟಾಗಿ ಉತ್ತಮ ಸಂಬಂಧ ಕಾಪಾಡಿಕೊಂಡಿಲ್ಲ. ಬರೀ ತ್ರಿಷಾ ಬಗ್ಗೆ ಮಾತ್ರವಲ್ಲ ಬೇರೆ ಕಲಾವಿದರ ಬಗ್ಗೆ ಹಾಗೂ ಸಿನಿಮಾಗಳ ಬಗ್ಗೆಯೂ ಕೆಟ್ಟದಾಗಿ ಮಾತಾಡಿರೋ ಉದಾಹರಣೆಗಳಿವೆ. ಸಿನಿಮಾ ತಾರೆಯರ ಖಾಸಗಿ ಬದುಕಿನ ಬಗ್ಗೆ ಕಾಮೆಂಟ್ ಮಾಡಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಇಂಥಾ ನಟನ ವಿವಾದದ ಪಟ್ಟಿಗೆ ಈಗ ತ್ರಿಷಾ ಸಹ ಸೇರಿಕೊಂಡಿದ್ದಾರೆ. ತ್ರಿಷಾ ಅವರ ವಿರುದ್ಧ ಮನ್ಸೂರ್ ಅಲಿ ಕೊಟ್ಟಿರುವ ಹೇಳಿಕೆ ಅಭಿಮಾನಿಗಳನ್ನ ಕೆರಳಿಸಿದೆ. ಮನ್ಸೂರ್ ಕ್ಷಮೆ ಕೇಳಬೇಕು, ಮತ್ಯಾವುದೇ ಸಿನಿಮಾದಲ್ಲೂ ಅವಕಾಶ ಕೊಡಬಾರದು ಅಂತ ಆಗ್ರಹಿಸ್ತಿದ್ದಾರೆ.