ಬಸ್.. ರೈಲು.. ಆಟೋಗಳಲ್ಲಿ ಸೀಟ್ಗಾಗಿ ಹೊಡೆದಾಡಿಕೊಳ್ಳುವುದು ಕಾಮಾನ್. ಕೆಲವೊಂದು ನೂಕು ನುಗ್ಗಲಾಗಿ ಜಗಳ ಆಗೋದು ಸಾಮಾನ್ಯ. ಆದರೇ ವಿಮಾನದಲ್ಲೂ ಕಿತ್ತಾಡಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಬಹುದು. ಹೌದು ದುಬೈನಿಂದ ಲಂಡನ್ಗೆ ತೆರಳುತ್ತಿದ್ದ ಪ್ಲೈಟ್ನಲ್ಲಿ ಸಣ್ಣ ವಿಚಾರಕ್ಕಾಗಿ ಯುವಕ- ಯುವತಿ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ಯುವತಿಯ ಕೂದಲು ಹಿಡಿದು ಯುವಕ ಎಳೆದಾಡಿದ್ದಾನೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯಾವುದೋ ಸಣ್ಣ ವಿಚಾರಕ್ಕೆ ಯುವತಿ-ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಇದು ಅತಿರೇಕಕ್ಕೆ ತಲುಪಿದ್ದು ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ. ಈ ವೇಳೆ ಯುವಕನು, ಆ ಯುವತಿಯ ಕೂದಲುಗಳನ್ನು ಹಿಡಿದು ಒಂದು ಪಂಚ್ ಕೊಟ್ಟಿದ್ದಾನೆ. ಇದರಿಂದ ದುಬೈಯಿಂದ ಲಂಡನ್ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಫುಲ್ ಗಾಬರಿಯಾಗಿ ಕಿರುಚಿದ್ದಾರೆ ಎನ್ನಲಾಗಿದೆ.
ಯುವತಿಗೆ ಕೂದಲು ಹಿಡಿದು ಥಳಿಸುತ್ತಿರುವಾಗ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಹಾಗೂ ಇತರೆ ಪ್ರಯಾಣಿಕರು ಗಲಾಟೆ ತಡೆಯಲು ಮುಂದಾಗಿದ್ದಾರೆ. ಬಳಿಕ ಯುವತಿಯು ಯುವಕನಿಗೆ ಥಳಿಸಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಯುವತಿಯನ್ನ ತಡೆದಿದ್ದರಿಂದ ಅಲ್ಲಿಗೆ ಗಲಾಟೆ ಶಾಂತವಾಗಿರುವುದು ವಿಡಿಯೋದಲ್ಲಿದೆ. ಗಲಾಟೆ ಏಕೆ ಆಗಿದೆ ಎಂದು ನಿಖರವಾಗಿ ತಿಳಿದು ಬಂದಿಲ್ಲ.


























