ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ , ಮಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ,ಮಂಗಳೂರು, ಪುತ್ತೂರು ತಾಲೂಕು ಸಹಕಾರಿ ಯೂನಿಯನ್ ನಿಯಮಿತ , ಪುತ್ತೂರು ಮತ್ತು ಪುತ್ತೂರು ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಕಾರ- ಸಹಭಾಗಿತ್ವದಲ್ಲಿ ೬೭ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಪ್ತಾಹದ ಉದ್ಘಾಟನೆ ಹಾಗೂ ಕೊರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ವಿಷಯದ ಬಗ್ಗೆ ವಿಚಾರಗೋಷ್ಠಿ ಕಾರ್ಯಕ್ರಮ ನ.14ರಂದು ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ “ಎಂ.ಸು0ದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ” ಕೊಂಬೆಟ್ಟು ಪುತ್ತೂರಿನಲ್ಲಿ ನಡೆಯಲಿದೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಸಂಜೀವ ಮಠಂದೂರು ಧವಜಾರೋಃಣ ನಡೆಸಲಿದ್ದು, ಮಂಗಳೂರು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಮಡಳ ನಿ ಅಧ್ಯಕ್ಷರಾಗಿರುವ ಸಹಕಾರರತ್ನ ಡಾ ಎಂ,ಎನ್ . ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿ.ಮಂಗಳೂರು ಅಧ್ಯಕ್ಷರಾಗಿರುವ ಶ್ರೀ ಪ್ರಸಾದ್ ಕೌಶಲ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೊರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ ಎನ್ನುವ ವಿಚಾರದ ಕುರಿತಾಗಿ ವಿಚಾರಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ರಮೇಶ್ ಭಟ್ ಉಪ್ಪಂಗಳ ಭಾಗವಹಿಸಲಿದ್ದು, ಮಂಗಳೂರು ದ.ಕ. ಸಹಕಾರ ಸಂಘಗಳ ಉಪನಿಬಂಧಕರಾಗಿರುವ ಶ್ರೀ. ಪ್ರವೀಣ್.ಬಿ.ನಾಯಕ್, ಕ್ಯಾಂಪ್ಕೋ ನಿರ್ದೇಶಕರಾದ ಶ್ರೀ ಚನಿಲ ತಿಮ್ಮಪ್ಪ ಶೆಟ್ಟಿ, ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿ.ಮಂಗಳೂರಿನ ನಿರ್ದೇಶಕರಾದ ಶ್ರೀ ರಾಜಶೇಖರ್ ಜೈನ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಮಂಗಳೂರು ನಿರ್ದೇಶಕ ಶ್ರೀ ಎಸ್ ಬಿ ಜಯರಾಮ ರೈ, ಕೆಎಮ್‌ಎಫ್ ಮಂಗಲೂರು ನಿರ್ದೆಶಕರು ಶ್ರೀ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು, ಎಪಿಎಂಸಿ ಪುತ್ತೂರು ಅಧ್ಯಕ್ಷ ಶ್ರೀ ದಿನೇಶ್ ಮೆದು, ಪಿಎಲ್‌ಡಿ ಬ್ಯಾಂಕ್ ಪುತ್ತೂರು ಅಧ್ಯಕ್ಷ ಶ್ರೀ ಭಾಸ್ಕರ ಗೌಡ ಇಚಿಲಂಪಾಡಿ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ಶ್ರೀ ಕೃಷ್ಣಕುಮಾರ್ ರೈ, ಸಹಕಾರಿ ಯೂನಿಯನ್ ಪುತ್ತೂರಿನ ಅಧ್ಯಕ್ಷರು ಶ್ರೀ ಪ್ರವೀಣ್ ರೈ ಮೇನಾಲ ಗಣ್ಯ ಅತಿಥಿಗಳಾಗಿ ಪಾಲ್ಗೊಳ್ಲಲಿದ್ದಾರೆ. ಈ ವೇಳೆ ಹಿರಿಯ ಸಹಕಾರಿಗಲಾದ ಶ್ರೀ ಸೀತಾರಾಮ ರೈ ಸವಣೂರು ಹಾಗೂ ಶ್ರೀ ಕರುಣಾಕರ ಗೋಖಟೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.