ದೇಶದಲ್ಲಿ ಮದುವೆ ಸೀಸನ್ ಶುರುವಾಗಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಹಲವು ಸುದ್ದಿಗಳು ಹೊರ ಬರುತ್ತಿವೆ. ಇದೀಗ ಚಲಿಸುತ್ತಿರುವ ರೈಲಿನಲ್ಲಿ ಜೋಡಿಯೊಂದು ಸತಿ-ಪತಿಯಾದ ವೀಡಿಯೋ ಒಂದು ಹಲ್ಚೆಲ್ ಎಬ್ಬಿಸಿದೆ.
ಫಿಲ್ಮಿ ಸ್ಟೈಲ್ನಲ್ಲಿ ಮದುವೆ ಆಗುತ್ತಿರುವ ವೀಡಿಯೋ ಭಾರೀ ವೈರಲ್ ಆಗುತ್ತಿದ್ದು, ಪ್ರಿಯಕರ ತನ್ನ ಪ್ರಿಯತಮೆಯ ಆಸೆಯನ್ನು ಈಡೇರಿಸಿದಂತೆ ಕಾಣ್ತಿದೆ. ಇಬ್ಬರು ಹಾರವನ್ನು ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವೀಡಿಯೋದಲ್ಲಿ ಮಾಂಗಲ್ಯ ಸೂತ್ರವನ್ನು ಆಕೆಯ ಕೊರಳಿಗೆ ಕಟ್ಟೋದನ್ನೂ ಕಾಣಬಹುದಾಗಿದೆ. ಇನ್ನು ಕೋಚ್ನಲ್ಲಿದ್ದ ಇತರೆ ಪ್ರಯಾಣಿಕರು ಮದುವೆಗೆ ಬೆಂಬಲ ನೀಡಿ, ಚಪ್ಪಾಳೆ ತಟ್ಟಿ ಆಶೀರ್ವಾದ ಮಾಡಿದ್ದಾರೆ. ಹಾರ ಬದಲಾಯಿಸಿಕೊಂಡ ಬೆನ್ನಲ್ಲೇ ಪ್ರಿಯತಮೆ, ಪ್ರಿಯಕರನನ್ನು ತಬ್ಬಿಕೊಂಡಿದ್ದಾಳೆ. ನಂತರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡಿದ್ದಾಳೆ.
ಈ ಅಪರೂಪದ ಮದುವೆ ಪಶ್ಚಿಮ ಬಂಗಾಳದಿಂದ ಜಾರ್ಖಂಡ್ಗೆ ಚಲಿಸುತ್ತಿದ್ದ ರೈಲಿನಲ್ಲಿ ನಡೆದಿದೆ.
ಘಟನೆಯನ್ನು ಪ್ರಯಾಣಿಕರು ಎಂಜಾಯ್ ಮಾಡುತ್ತಿದ್ದು, ತಮ್ಮ ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಸಹ ಪ್ರಯಾಣಿಕರ ನಡೆಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಪ್ರೇಮಿಗಳ ಪರ ಬ್ಯಾಟ್ ಬೀಸಿದ್ದಾರೆ.