ಉಡುಪಿ : ನದಿಯಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬರು ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಆದರೇ ಚಿನ್ನದ ಸರ ಕಳೆದುಕೊಂಡು ದಿಕ್ಕು ತೋಚದೇ ಕೊಲ್ಲೂರು ಮೂಕಾಂಬಿಕೆಯನ್ನು ಪ್ರಾರ್ಥಿಸಿದ ಅರ್ಧ ಗಂಟೆಯಲ್ಲೇ ಚಿನ್ನದ ಸರ ಸಿಕ್ಕಿರುವ ಆಶ್ಚರ್ಯಕರ ಘಟನೆ ಉಡುಪಿಯಲ್ಲಿ ನಡೆದಿದೆ.
ಮಲ್ಪೆ ಮೂಲದ ಕಿಶನ್ ಕೋಟ್ಯಾನ್ ಮಣಿಪಾಲ ಎಂಐಟಿ ವಿದ್ಯಾರ್ಥಿಯಾಗಿದ್ದು ಸ್ನೇಹಿತರೊಂದಿಗೆ ಸ್ವರ್ಣಾ ನದಿಯಲ್ಲಿ ಈಜಲು ಹೋಗಿದ್ದ ವೇಳೆ 3 ಲಕ್ಷ ಮೌಲ್ಯದ ಚಿನ್ನದ ಸರ ಕಳೆದುಕೊಂಡಿದ್ದರು. ಎರಡು ದಿನ ಎಷ್ಟೇ ಹುಡುಕಾಡಿದ್ರೂ ಸಿಕ್ಕಿರಲಿಲ್ಲ.
ಕೊನೆಗೆ ಮುಳುಗುತಜ್ಞ ಈಶ್ವರ ಮಲ್ಪೆ ಸಹಾಯಕ್ಕೆ ಧಾವಿಸಿ ಹುಡುಕಾಡಿದ್ರು ಆಗಲೂ ಸಿಗದಿದ್ದಾಗ ಕೊಲ್ಲೂರು ಮೂಕಾಂಬಿಕೆ ದೇವಿಯನ್ನು ಸ್ಮರಿಸಿ ಬೇಡಿಕೊಂಡಿದ್ದಾನೆ. ಹೀಗೆ ಬೇಡಿಕೊಂಡ ಅರ್ಧ ಗಂಟೆಯಲ್ಲಿ 30 ಪೀಟ್ ಅಡಿಯಲ್ಲಿ ಚಿನ್ನದ ಸರ ಈಶ್ವರ್ ಮಲ್ಪೆ ಅವರಿಗೆ ಸಿಕ್ಕಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.