ಪುತ್ತೂರು : ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆದಂಬಾಡಿ ನಿವಾಸಿ ಮಹಿಳೆಯೋರ್ವರು ನೀಡಿರುವ ದೂರಿನ ಮೇರೆಗೆ ದಿವಾಕರ ಕುಲಾಲ್, ಅವಿನಾಶ್, ರಾಮಕೃಷ್ಣ ಭಟ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆ ಪುತ್ತೂರು ತಾಲೂಕು ಪಾಣಾಜೆ ಗ್ರಾಮದಲ್ಲಿ ಜಮೀನು ಖರೀದಿಸಿದ್ದು , ಸದ್ರಿ ಜಮೀನಿನಲ್ಲಿ ನ.30 ರಂದು ಸಂಜೆ ಕೃಷಿ ಕೆಲಸ ಮಾಡಿಸುತ್ತಿದ್ದಾಗ, ವಾಸಕ್ಕೆಂದು ನಿರ್ಮಿಸಿದ ಮನೆ ಸ್ಥಳಕ್ಕೆ ದಿವಾಕರ ಕುಲಾಲ್, ಅವಿನಾಶ್ ಮತ್ತು ರಾಮಕೃಷ್ನ ಭಟ್ ರವರು ಅಕ್ರಮವಾಗಿ ಪ್ರವೇಶ ಮಾಡಿ, ನಾಳೆಯಿಂದ ಈ ಸ್ಥಳಕ್ಕೆ ಬಂದು ಯಾವುದೇ ಕೃಷಿ ಕೆಲಸ ಮಾಡಿಸಬಾರದು, ಆಳುಗಳನ್ನು ಕರೆದುಕೊಂಡು ಬರಬಾರದು, ಮರಳಿ ಬಂದಲ್ಲಿ ಜೀವ ಸಹಿತ ಹೇಗೆ ಹೋಗುತ್ತಿರಿ ನೋಡಿಕೊಳ್ಳುತ್ತೇವೆಂದು ಪ್ರಾಣ ಬೆದರಿಕೆ ಹಾಕಿದ್ದು, ಅದಲ್ಲದೇ ಮಹಿಳೆಯ ಫೋಟೋವನ್ನು ಅವಿನಾಶ ಕೆ ಮತ್ತು ರಾಮಕೃಷ್ಣ ಭಟ್ ಎಂಬುವವರು ತಮ್ಮ ಮೊಬೈಲ್ ನಲ್ಲಿ ತೆಗೆದಿರುತ್ತಾರೆ. ಇದರಿಂದಾಗಿ ಖಾಸಗಿತನಕ್ಕೆ ಧಕ್ಕೆಯಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 115-2023 ಕಲಂ:447,506,509 R/W 34 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.