ವಿಟ್ಲ : ವಿಟ್ಠಲ ಎಜುಕೇಶನ್ ಸೊಸೈಟಿ, ವಿಟ್ಠಲ ಪದವಿಪೂರ್ವ ಕಾಲೇಜು ಇದರ ವಾರ್ಷಿಕೋತ್ಸವ 2023-24 ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿ ಬೆಂಗಳೂರು ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ದೀಪ ಬೆಳಗಿಸಿ ಉದ್ಘಾಟಿಸಿದರು.

ವಿಟ್ಠಲ ಎಜುಕೇಶನ್ ಸೊಸೈಟಿ ಗೌರವಾಧ್ಯಕ್ಷ ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರುಗಳಾದ ರವಿಪ್ರಕಾಶ್, ನಿತ್ಯಾನಂದ ನಾಯಕ್, ಸದಾಶಿವ ಬನ, ಸಿ ಎಫ್ ಸಿಕ್ವೇರ, ಎಂ ಕೆ ಪುರುಷೋತ್ತಮ ಭಟ್, ವೈಸ್ ಪ್ರಿನ್ಸಿಪಾಲ್ ಕಿರಣ್ ಕುಮಾರ್ ಬ್ರಹ್ಮಾವರ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಆಶ್ಲೇಷ್, ಪ್ರೀತೇಶ್, ಪ್ರಣತಿ ಕೆ ಆರ್, ಲತಾಶ್ರೀ, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಅರುಣಾ ವಂದಿಸಿದರು. ಜಲಜಾಕ್ಷಿ ನಿರೂಪಿಸಿದರು. ರಶ್ಮಿಳಾ, ಆಶಾ, ಸಂಪಾವತಿ, ಸವಿತಾ, ಚಂದ್ರಕಾಂತ, ಶ್ರೀನಿವಾಸ, ನಳಿನಿ ಸಹಕರಿಸಿದರು.
