ಪುತ್ತೂರು : ಕೊರೊನಾ ಸಂದರ್ಭದಲ್ಲಿ ಹಗಲಿರುಳೆನ್ನದೇ ಅಲ್ಲಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪುತ್ತೂರಿನ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಮುಳಿಯ ಜುವೆಲ್ಲರ್ಸ್ ಸಂಸ್ಥೆಯಿಂದ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ತೆರಳಿ ಬೆಳಗ್ಗಿನ ಉಪಹಾರವನ್ನು ನೀಡಿದರು.
ಇಂದಿನಿಂದ ಪ್ರತಿದಿನ ಒಂದು ವಾರಗಳ ತನಕ ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರವನ್ನು ನೀಡುವುದಾಗಿ ಮುಳಿಯ ಜುವೆಲ್ಲರ್ಸ್ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಮುಂದಿನ ವಾರದಿಂದ ಪೊಲೀಸ್ ಸಿಬ್ಬಂದಿಗಳಿಗೆ ಉಪಹಾರ ನೀಡುವವರು ಇದ್ದರೇ ಮುಳಿಯ ಸಂಸ್ಥೆಯ ವಾಹನದಲ್ಲಿಯೇ ಅವರಿಗೆ ಸರ್ವಿಸ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಮುಂದಿನ ವಾರದಿಂದ ಪ್ರಾಯೋಜಕರ ಸಹಾಯ ಪಡೆದು ಯೋಜನೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.