ಪುತ್ತೂರು : ತಮಗೆ ತಂದಿಟ್ಟ ಊಟವನ್ನು ಹಸಿವಿನಿಂದ ತಮ್ಮ ಬಳಿಗೆ ಬಂದ ಬೀದಿ ನಾಯಿಗೆ ಹಾಕಿ ಅದರ ಹಸಿವನ್ನು ನೀಗಿಸುವ ಕೆಲಸವನ್ನು ಪುತ್ತೂರು ಟೌನ್ ಪೊಲೀಸ್ ಠಾಣೆಯ ಎಎಸ್ ಐ ವೆಂಕಟ್ರಮಣ ಗೌಡ ಮಾಡಿದ್ದಾರೆ.
ಇಂದು ಮಧ್ಯಾಹ್ನ ದರ್ಬೆ ವೃತ್ತದ ಬಳಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟರಮಣ ಗೌಡ ತಮಗೆಂದು ತಂದಿಟ್ಟಿದ್ದ ಊಟವನ್ನು ನಾಯಿಗೆ ಹಾಕಿ ಮೂಖ ಪ್ರಾಣಿಯ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ.