ವಿಟ್ಲ : ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಸಮೀಪದ ಬೈರಿಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಬೈರಿಕಟ್ಟೆ ಅಂಗ್ರಿಮನೆ ನಿವಾಸಿ ಗಣೇಶ್ ಕೆ. (39) ಎಂದು ಗುರುತಿಸಲಾಗಿದೆ.

ಗಣೇಶ್ ರವರು ಹುಲ್ಲು ತೆಗೆಯಲು ತೆರಳಿದ್ದು, ತುಂಬಾ ಸಮಯವಾದರೂ ಮನೆಗೆ ಬಾರದ ಹಿನ್ನೆಲೆ ಮನೆಯವರು ತೋಟಕ್ಕೆ ಹುಡುಕಿಕೊಂಡು ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ.


























