ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಸೋಂಕಿತರನ್ನು ಶಿಫ್ಟ್ ಮಾಡುವಲ್ಲಿ ಮತ್ತು ಇತರ ರೋಗಿಯನ್ನು ಮನೆಯಿಂದ ಕರೆದುಕೊಂಡು ಹೋಗುವಲ್ಲಿ ಆಂಬ್ಯುಲೆನ್ಸ್ ಸಮಸ್ಯೆ ಉದ್ಭವಿಸಬಾರದು ಮತ್ತು ತೀರಾ ಬಡವರಿಗೆ ನಿಮ್ಮ ಕಡೆಯಿಂದ ಸಹಾಯ ಮಾಡುವಂತೆ ಶಾಸಕ ಸಂಜೀವ ಮಠಂದೂರು ತಾಲೂಕಿನ ಆಂಬುಲೆನ್ಸ್ ಚಾಲಕರಲ್ಲಿ ವಿನಂತಿಸಿದ್ದಾರೆ.
ಪುತ್ತೂರು ತಹಶೀಲ್ದಾರ್ ಸಭಾಂಗಣದಲ್ಲಿ ಮೇ.18ರಂದು ನಡೆದ ಪುತ್ತೂರಿನಲ್ಲಿರುವ ಆಂಬ್ಯುಲೆನ್ಸ್ ಚಾಲಕರ ಮತ್ತು ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಆಂಬ್ಯುಲೆನ್ಸ್ ಚಾಲಕರು ಕೋವಿಡ್ ವಾರಿಯರ್ಸ್ ಆಗಿದ್ದು ಅವರಿಗೆ ಕೋವಿಡ್ ಲಸಿಕೆ ನೀಡಿಕೆ ಆಗಬೇಕೆಂದು ಹೇಳಿದರು.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತಹಶೀಲ್ದಾರ್ ರಮೇಶ್ ಬಾಬು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರು ಚಾಲಕರಿಗೆ ಎದುರಾಗುವ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಉಪತಹಶೀಲ್ದಾರ್ ಸುಲೋಚನಾ ಕಾರ್ಯಕ್ರಮ ನಿರ್ವಹಿಸಿದರು.