ಬೆಂಗಳೂರು : ಉದ್ಯಮಿಯನ್ನು ಟ್ರ್ಯಾಪ್ ಮಾಡಿದ್ದ ಹನಿಟ್ರ್ಯಾಪ್ ಗ್ಯಾಂಗ್ ಸಿಸಿಬಿ ಬಲೆಗೆ ಬಿದ್ದಿದೆ.
ಖಲೀಮ್, ಸಭಾ, ಓಬೆದ್ ರಕೀಮ್, ಅತೀಕ್ ಬಂಧಿತ ಆರೋಪಿಗಳು.
ಆರೋಪಿಗಳು ಅತಾವುಲ್ಲಾ ಎಂಬ ಉದ್ಯಮಿಯನ್ನು ಟ್ರ್ಯಾಪ್ ಮಾಡಿದ್ದರು. ಬಂಧಿತ ಆರೋಪಿಗಳಲ್ಲಿ ಖಲೀಮ್ ಮತ್ತು ಸಭಾ ಇಬ್ಬರೂ ಗಂಡ-ಹೆಂಡತಿ. ಆದರೆ ಅತಾವುಲ್ಲಾಗೆ ಪತ್ನಿ ಸಭಾಳನ್ನು ವಿಧವೆ ಎಂದು ಖಲೀಮ್ ಪರಿಚಯ ಮಾಡಿಸಿಕೊಟ್ಟಿದ್ದ ಎನ್ನಲಾಗಿದೆ.
ಟ್ರ್ಯಾಪ್ ಮಾಡಿದ್ದು ಹೇಗೆ..?
ಪರಿಚಯ ಮಾಡಿಸಿ ಆಕೆಯನ್ನು ನೋಡಿಕೊಳ್ಳುವಂತೆ ಹೇಳಿದ್ದ. ನಂತರ ಸಭಾ ಮತ್ತು ಅತಾವುಲ್ಲಾ ನಡುವೆ ದೈಹಿಕ ಸಂಪರ್ಕ ನಡೆದಿತ್ತು. ಕೆಲ ದಿನಗಳ ನಂತರ ಆರ್.ಆರ್. ನಗರದಲ್ಲಿ ರೂಮ್ ಬುಕ್ ಮಾಡಲು ಸಭಾ ಕರೆದಿದ್ದರು. ಆಧಾರ್ ಕಾರ್ಡ್ ಜೊತೆ ಬಾ ಎಂದು ಅತೀವುಲ್ಲಾಗೆ ಕರೆದಿದ್ದಳು. ರೂಮ್ ಬುಕ್ ಮಾಡಿ ಕೆಲ ಹೊತ್ತಲ್ಲೇ ಆರೋಪಿಗಳು ಎಂಟ್ರಿಯಾಗಿದ್ದಾರೆ.
ಏಕಾಏಕಿ ಎಂಟ್ರಿ ಕೊಟ್ಟು ಸೀನ್ ಕ್ರಿಯೇಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳಾದ ಖಲೀಮ್, ರಕೀಬ್, ಅತೀಕ್ ಸೀನ್ ಕ್ರಿಯೇಟ್ ಮಾಡಿದ್ದಾರೆ. 6 ಲಕ್ಷ ರೂಪಾಯಿ ಕೊಡಲಿಲ್ಲ ಎಂದರೆ ನಿನ್ನ ನಿಜ ವಿಚಾರ ಮನೆಯವರಿಗೆ ಹೇಳ್ತೀವಿ ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಿಸಿಬಿಗೆ ಮಾಹಿತಿ ಸಿಗುತ್ತಿದ್ದಂತೆಯೇ ದಾಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ರೀತಿ ಇನ್ನೂ ಹಲವರಿಗೆ ಈ ಟೀಂನಿಂದ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.


























