ಪುತ್ತೂರು : ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ರವರ ತಾಯಿ ಕೆಮ್ಮಾಯಿ ನಿವಾಸಿ ರಾಧಾವಾಸುದೇವ ಶೆಣೈ (91) ಇಂದು ನಿಧನರಾದರು.

ಮೃತರು ಪುತ್ರರಾದ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಭಾಮಿ ಪ್ರಕಾಶ್ ಶೆಣೈ ಮತ್ತು ಪುತ್ರಿಯರಾದ ಶೈಲಾ ನಾಯಕ್, ಶೋಭಾ ನಾಯಕ್, ಭಾರತಿ ನಾಯಕ್ ರನ್ನು ಅಗಲಿದ್ದಾರೆ.
ರಾಧಾವಾಸುದೇವ ಶೆಣೈ ರವರ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ.


























