ಈಗ ಕೊರೋನಾ ಕಾರಣಕ್ಕೆ ವ್ಯಾಕ್ಸಿನ್ ತೆಗೆದುಕೊಳ್ಳಲೇಬೇಕು ಎನ್ನುವ ವಿಚಾರ ಪ್ರತಿಯೊಬ್ಬರಿಗೂ ತಿಳಿದಿದೆ.. ಆದರೆ ಇದರ ವಿಚಾರದಲ್ಲೂ ಕಳ್ಳ ದಂಧೆ ಆರಂಭಗೊಂಡಿದೆ. ಎಲ್ಲಿ ಪರಿಹಾರವಿರುತ್ತದೆಯೋ ಅಲ್ಲಿಯೇ ಸಮಸ್ಯೆಯೂ ಇರುತ್ತೆ ಅನ್ನುವುದಕ್ಕೆ ನಿದರ್ಶನ ಸಿಗುತ್ತಿದೆ.
ಹೀಗೆ ಸರ್ಕಾರದ ಕೋವಿಶೀಲ್ಡ್ ವ್ಯಾಕ್ಸಿನ್ ಉತ್ತಮ ನಿರ್ಧಾರದಿಂದ ಜನರನ್ನು ಸೇರಲು ಸನ್ನದ್ಧವಾಗುತ್ತಿದ್ದರೆ ಇಲ್ಲೊಂದು ಹಿಂದಿ ಭಾಷೆಯಲ್ಲಿ ಮಾತನಾಡುವ ತಂಡ ಖತರ್ನಾಕ್ ಉಪಾಯಗಳನ್ನು ಮಾಡಿ ಜನರ ದಿಕ್ಕು ತಪ್ಪಿಸಲು ಹೊಂಚು ಹಾಕುವ ಪ್ರಯತ್ನದಲ್ಲಿ ನಿರಂತರವಾಗಿದೆ.
ಹೇಗೆ ಅಂತೀರಾ? ಹೌದು, ಈ ತಂಡ ನೇರ ನಿಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡುತ್ತದೆ. ನಿಮ್ಮ ಬಳಿ ವ್ಯಾಕ್ಸಿನ್ ತೆಗೆದುಕೊಂಡಿದ್ದೀರಾ? ಎಂದು ಪ್ರಶ್ನಿಸುತ್ತದೆ. ನೀವು ಇಲ್ಲಾ ಎಂದಲ್ಲಿ ನೀವು ಆಸ್ಪತ್ರೆಗೆ ಬಂದು ತಗೋತೀರಾ ಅಥವಾ ನಾವು ಮನೆಗೆ ಬಂದು ವ್ಯಾಕ್ಸಿನ್ ಕೊಡಬೇಕೇ? ಎನ್ನುವ ಪ್ರಶ್ನೆ ಬರುತ್ತದೆ. ಬಹುತೇಕರು ಹೊರ ಹೋಗುವ ಭಯದಿಂದ ಖಂಡಿತಾ ಎರಡನೇ ಆಯ್ಕೆಯನ್ನು ಹೇಳುತ್ತೇವೆ. ಆಗ ಅಲ್ಲಿಂದ ಆಧಾರ್ ಸಂಖ್ಯೆ ಕೊಡುವಂತೆ ಸೂಚನೆ ಬರುತ್ತದೆ. ನಾವೋ ನಂಬಿ ಸಂಖ್ಯೆ ಕೊಟ್ಟು ಬಿಡುತ್ತೇವೆ. ಆಗ ನಮ್ಮ ಸಂಖ್ಯೆ ಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ಅವರೂ ಕೇಳಿ, ಆಗ ರಿಜಿಸ್ಟರ್ ಆಗಿದೆ ಅಂತ ಹೇಳಿ ಆದರೆ ಕಥೆ ಬೇರೆಯಾಗಿರುತ್ತದೆ. ಈ ಮೂಲಕ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಜೋಡಣೆಯಾಗಿದ್ದರೆ ನಿಮ್ಮ ಹಣವನ್ನೆಲ್ಲಾ ಕುಳಿತಲ್ಲಿಂದಲೇ ದರೋಡೆ ಮಾಡಿ ಬಿಡುತ್ತಾರೆ..
ಆದ್ದರಿಂದ ಈ ರೀತಿ ಕರೆ ಬಂದಲ್ಲಿ ಎಚ್ಚರಿಕೆಯಿಂದಿರಿ.. ಈಗಾಗಲೇ ವ್ಯಾಕ್ಸಿನ್ ನೋಂದಾವಣಿ ಸರ್ಕಾರದ ವೆಬ್ ಸೈಟ್ ನಲ್ಲಿ ಲಭ್ಯ.. ಇದನ್ನೇ ಪಾಲಿಸಿ.. ಈ ಬಗ್ಗೆ ತಿಳಿಯದಿದ್ದಲ್ಲಿ ನೋಂದಾವಣಿ ಮಾಡುವ ಬಗೆಯನ್ನು ಯೂಟ್ಯೂಬ್ ಅಥವಾ ತಿಳಿದವರ ಬಳಿ ಕೇಳಿಕೊಂಡು ಮುನ್ನಡೆಯಿರಿ.
ವ್ಯಾಕ್ಸಿನ್ ನೋಂದಾವಣಿ ಮಾಡುವ ಬಗ್ಗೆ ತಿಳಿವಳಿಕೆ ಬೇಕಾದಲ್ಲಿ ಈ ಲಿಂಕ್ ನೋಡಿ https://youtu.be/3O9SzlF0b4M