ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ಉಪಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಪ್ರಕಟಗೊಂಡಿದೆ.
ಬಹಳ ಕೂತೂಹಲ ಮೂಡಿಸಿರುವ ನಗರಸಭಾ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಾರ್ಡ್-11ರಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ರೈ ಗೆಲುವಿನ ನಗೆ ಬೀರಿದ್ದಾರೆ.

ಅದೇ ರೀತಿ ವಾರ್ಡ್-1ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಶೇವಿರೆ ಜಯಗಳಿಸಿದ್ದಾರೆ.
ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದ್ದು, ರಮೇಶ್ ರೈ ಹಾಗೂ ದಿನೇಶ್ ಶೇವಿರೆ ಅವರು ಜಯಗಳಿಸಿದ್ದಾರೆ.
ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ನೆಲ್ಲಿಕಟ್ಟೆ ವಾರ್ಡ್ 11 :
- ಬಿಜೆಪಿ – 431
- ಕಾಂಗ್ರೆಸ್ – 400
- ಪುತ್ತಿಲ ಪರಿವಾರ – 216
- ನೋಟಾ – 6
ರಕ್ತೇಶ್ವರಿ ವಠಾರ ವಾರ್ಡ್ 1
- ಬಿಜೆಪಿ – 219
- ಕಾಂಗ್ರೆಸ್ – 427
- ಪುತ್ತಿಲ ಪರಿವಾರ – 308
- ನೋಟಾ – 4

























