ಬಂಟ್ವಾಳ : ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಸರ್ಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿಯೊಬ್ಬರು ಕೊರೋನಾ
ಸೋಂಕಿಗೆ ತುತ್ತಾಗಿ ಮೇ.18ರಂದು ಮೃತಪಟ್ಟಿದ್ದಾರೆ. ಸೂರಿಕುಮೇರು ನಿವಾಸಿಯಾಗಿದ್ದಎಮರಿಟಾ ಉಷಾ ಪಾಯಸ್(45) ಮೃತಪಟ್ಟವರು.
ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಇವರು ವಾರಕ್ಕೆ ಎರಡು ಬಾರಿ ಡಯಾಲಿಸೀಸ್
ಮಾಡಿಸಿಕೊಳ್ಳುತ್ತಿದ್ದರು. ಅದರಂತೆ ಕೆಲದಿನದ ಹಿಂದೆ ಡಯಾಲಿಸ್ ಸ್ ಗೆ ತೆರಳಿದ್ದ ಇವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡು ದಿನಗಳ ಹಿಂದಷ್ಟೇ ವರದಿ ಬಂದಿದ್ದು, ಮೇ.18ರಂದು ಸಾಯಂಕಾಲ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಮೃತರು ಪುತ್ತೂರಿನ ವಿಕ್ಟರ್ ಶಾಲೆಯಲ್ಲಿ ಶಿಕ್ಷಕರಾಗಿರುವ ಪತಿ ರೊನಾಲ್ ಮೋರಿಸ್, ಇಬ್ಬರು ಮಕ್ಕಳ ಆಗಲಿದ್ದಾರೆ. ಮೃತ ಶರೀರದ ಅಂತಿಮ ಸಂಸ್ಕಾರವನ್ನು ಕೋವಿಡ್
ನಿಯಮದಂತೆ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಆವರಣದಲ್ಲಿ ಮೇ.19ರಂದು ನಡೆಸಲಾಯಿತು.