ಕರಾವಳಿ ಭಾಗದಲ್ಲಿ ತೌಕ್ತೇ ಚಂಡಮಾರುತದಿಂದ ಮಳೆಯಾಗಿದ್ದು ಇದೀಗ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಚಂಡಮಾರುತ ಪರಿಣಾಮ ಮುಂದಿನ ವಾರದಿಂದ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಬಂಗಾಳಕೊಲ್ಲಿಯ ರೂಪುಗೊಳ್ಳುತ್ತಿರುವ ಚಂಡಮಾರುತಕ್ಕೆ ಯಾಸ್ ಎಂದು ಹೆಸರಿಡಲಾಗಿದ್ದು, ಹೊಸ ಚಂಡಮಾರುತದ ಕಡಿಮೆ ಒತ್ತಡವು ಮೇ 22 ರೊಳಗೆ ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುವ ನಿರೀಕ್ಷೆಯಿದೆ. ಮೇ 23 ಚಂಡಮಾರುತದ ಒತ್ತಡದ ಹಂತವನ್ನು ಗುರುತಿದ ಬಳಿಕ ಅಂತಿಮವಾಗಿ ಚಂಡಮಾರು ರೂಪುಗೊಂಡು ಮೇ 24-25ರ ವೇಳೆಗೆ ವೇಗವನ್ನು ಪಡೆಯುವ ನಿರೀಕ್ಷೆಯಿದೆ. ಮೇ 26 ರಂದು ಕೇರಳ ಅಥವಾ ಒಡಿಶಾ ಮತ್ತು ಪಶ್ಚಿಮ ಬಂಗಾಳದ ತೀರವನ್ನು ಅಪ್ಪಳಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಕೆ.ಜೆನಮಣಿ ಬುಧವಾರ ಮಾಹಿತಿ ನೀಡಿದ್ದಾರೆ,
ಇದರೊಂದಿಗೆ ಮುಂಗಾರಿಗೆ ಪ್ರವೇಶಕ್ಕೆ ದಿನಗಣನೆ ಆರಂಭವಾಗಿದ್ದು, ಐಎಂಡಿ ಪ್ರಕಾರ ಮೇ 31ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಪ್ರವೇಶ ಪಡೆಯಲಿದೆ. ಬಳಿಕ ಒಂದೆರಡು ದಿನಗಳಲ್ಲಿ ರಾಜ್ಯ ಕರಾವಳಿಗೆ ಆಗಮಿಸಲಿದೆ.