ಉಪ್ಪಿನಂಗಡಿ : ಮೆರೈನ್ ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ. ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ನೆ, ಬಿಳಿಯೂರು ನಿವಾಸಿ ಭವಿತ್ ಕೆ.ಎನ್ ನೀಡಿರುವ ದೂರಿನ ಮೇರೆಗೆ ಪ್ರಜ್ವಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಭವಿತ್ ಕೆ.ಎನ್ ಎಂಬವರು ಮೆರೈನ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದಾಗ ಸಾಮಾಜಿಕ ಜಾಲತಾಣದ (ಇನ್ಟಾಗ್ರಾಮ್) ಮೂಲಕ ಪ್ರಜ್ವಲ್ ಎಂಬಾತನು ಪರಿಚಯವಾಗಿದ್ದು, ಪ್ರಜ್ವಲ್ 05.06.2023 ರಂದು ಬೆಂಗಳೂರಿನಲ್ಲಿ ಭವಿತ್ ರನ್ನು ಭೇಟಿ ಮಾಡಿ ಮಾತುಕತೆ ಮಾಡಿ, ಮೆರೈನ್ ನಲ್ಲಿ ಕೆಲಸಕ್ಕಾಗಿ ರೂ 3,00,000/- ಖರ್ಚು ಇದೆ ಎಂದು ತಿಳಿಸಿದ್ದು, ದಿನಾಂಕ:16.06.2023 ರಿಂದ ದಿನಾಂಕ:28.08.2023 ರ ಅವಧಿಯಲ್ಲಿ ಹಂತ-ಹಂತವಾಗಿ, ಪ್ರಜ್ವಲ್ ಖಾತೆಗೆ ಒಟ್ಟು 2,10,000/- ರೂ ಹಣವನ್ನು ಪಾವತಿಸಿರುತ್ತಾರೆ. ನಂತರ ನಿಮಗೆ ಕೆಲಸ ಮಾಡಿಕೊಡಲು ಆಗುವುದಿಲ್ಲ 10 ದಿವಸದೊಳಗೆ ಹಣವನ್ನು ವಾಪಸ್ಸು ಕೊಡುತ್ತೇನೆಂದು ಹೇಳಿ ನಂಬಿಸಿ, ಈವರೆಗೆ ಕೆಲಸವನ್ನು ಮಾಡಿಕೊಡದೆ, ಪಡೆದಿರುವ ಹಣವನ್ನೂ ಹಿಂತಿರುಗಿಸದೇ, ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:11/2024 ಕಲಂ: 417,420 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























